ಕಿನ್ನಿಗೋಳಿ: ಸಮಾಜಕ್ಕೆ ಉತ್ತಮ ಸಂದೇಶ ನೀಡುವ ನಾಟಕಗಳು ನಿರಂತರ ಪ್ರದರ್ಶನಗೊಳ್ಳಬೇಕು ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಹೇಳಿದರು.
ಕಿನ್ನಿಗೋಳಿ ಯುಗಪುರುಷದ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿದಾನದಲ್ಲಿ 20ನೆಯ ವರ್ಷಾಚರಣೆಯಲ್ಲಿರುವ ವಿಜಯಾ ಕಲಾವಿದರ ಪ್ರಥಮ ನಾಟಕ ಹರೀಶ್ ಪಡುಬಿದ್ರೆ ಅವರ ರಚನೆಯ ಕಡೀರ ಮಗೆ ಹಾಗೂ ತ್ರಿಶತಕ ಪ್ರದರ್ಶಗೊಂಡಿದ್ದ ಬೈರಾಸ್ ಭಾಸ್ಕರೆ ತುಳು ನಾಟಕಗಳ ಮರು ಪ್ರದರ್ಶನದ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು.20kinni nataka

ಗ್ರಾಮೀಣ ಪ್ರದೇಶದ ವಿಜಯಕಲಾವಿದರು ತಂಡ ಬೇರೆ ಬೇರೆ ಉತ್ತಮ ನಾಟಕಗಳಿಂದ ಪ್ರಸಿದ್ದಿ ಪಡೆದಿದೆ ತಂಡ ಇನ್ನಷ್ಟು ಬೆಳೆಯಲಿ ಎಂದರು. ಈ ಸಂದರ್ಭಉದ್ಯಮಿ ಪ್ರಥ್ವೀರಾಜ್ ಆಚಾರ್ಯ, ಏಳಿಂಜೆ ಕೃಷ್ಣ ಶೆಟ್ಟಿ, ವಿಜಯಾ ಕಲಾವಿದರ ಅಧ್ಯಕ್ಷ ಶರತ್ ಶೆಟ್ಟಿ, ಕಾರ್ಯದರ್ಶಿ ಲಕ್ಷ್ಮಣ್ ಬಿ.ಬಿ ಏಳಿಂಜೆ, ನಿರ್ವಾಹಕ ಸುಧಾಕರ ಸಾಲ್ಯಾನ್ ಸಂಕಲಕರಿಯ, ನಾಟಕ ರಚನೆಕಾರ ಹರೀಶ್ ಪಡುಬಿದ್ರೆ, ಕಲಾವಿದರಾದ ರಾಜೇಶ್ ಕೆಂಚನಕೆರೆ, ಸೀತಾರಾಮ ಶೆಟ್ಟಿ ಎಳತ್ತೂರು, ನರೇಂದ್ರ ಕೆರೆಕಾಡು, ಭಗವಾನ್ ಸುರತ್ಕಲ್, ಸತೀಶ್ ಶಿರ್ವ, ಚಿತ್ರಲೇಖಾ ಭಗವಾನ್, ಉದಯ ಕುಮಾರ್ ಹಳೆಯಂಗಡಿ, ನಿತೇಶ್ ಕಾಂತಾವರ, ಹರಿಪ್ರಸಾದ್ ನಂದಳಿಕೆ, ರಕ್ಷಿತಾ ಕುಲಾಲ್, ಸುಶ್ಮಿತಾ ಏಳಿಂಜೆ, ಧ್ವನಿ ಬೆಳಕು ಸಂಯೋಜನೆಯ ಪ್ರದೀಪ್ ನಂದಳಿಕೆ, ಅಕ್ಷಿತ್ ಏಳಿಂಜೆ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *