ಸುದ್ದಿ9 ಕೈಕಂಬ: ಕಮ್ಮಾಜೆ ನಾಗಶ್ರೀ ಮಿತ್ರವ್ರಂದ ಅವರಿಂದ ಮೊಸರುಕುಡಿಕೆ ಉತ್ಸವದ ಪ್ರಯುಕ್ತ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಉಳಿಪಾಡಿಗುತ್ತು ರಾಜೇಶ್ ನಾಯಕ್, ಆಶಾಪ್ರಸಾದ್, ಜಿಲ್ಲಾ ಪಂಚಾಯತ್ ಸದಸ್ಯೆ ಜಯಶ್ರೀ ಕೆ.ಎ, ತಾಲೂಕು ಪಂಚಾಯತ್ ಸದಸ್ಯೆ ಗುಣವತಿ, ಬಡಗಬೆಳ್ಳೂರು ಪಂಚಾಯತ್ ಅಧ್ಯಕ್ಷೆ ವೇದಾವತಿ ನಾಗಶ್ರೀ ಮಿತ್ರವ್ರಂದದ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.






