ಬಾಗ್ಧಾದ್ : ಇರಾಕ್‌ನ ಸುನ್ನೀ ಉಗ್ರಗಾಮಿ ಸಂಘಟನೆಯಾಗಿರುವ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ (ಇಸಿಸ್)ಗೆ ಸೇರ್ಪಡೆಗೊಂಡಿದ್ದ ನಾಲ್ವರು ಭಾರತೀಯ ಯುವಕರಲ್ಲಿ ಓರ್ವ ಹತ್ಯೆಗೀಡಾಗಿರುವುದಾಗಿ ಐಸಿಸ್‌ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಮಹಾರಾಷ್ಟ್ರದ ಕಲ್ಯಾಣ್‌ನಿಂದ ನಾಪತ್ತೆಯಾಗಿ ಇರಾಕ್‌ಗೆ ತೆರಳಿ ಇಸಿಸ್‌ಗೆ ಸೇರ್ಪಡೆಗೊಂಡಿದ್ದಾರೆನ್ನಲಾಗಿದ್ದ ನಾಲ್ವರು ಭಾರತೀಯ ಯುವಕರಲ್ಲಿ ಆರಿಫ್ ಫಯಾಜ್ ಮಜೀದ್ ಎಂಬಾತ ಹತ್ಯೆಗೀಡಾಗಿದ್ದಾನೆ ಎಂದು ಹೇಳಲಾಗಿದೆ.
ಕಲ್ಯಾಣ್‌ನ ವೈದ್ಯರೋರ್ವರ ಮಗನಾಗಿದ್ದ ಈತ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದನು. ಈತನೊಂದಿಗೆ ಇರಾಕ್‌ಗೆ ತೆರಳಿದ್ದ ಶಾಹೀನ್ ಫಾರೂಕಿ ಟಂಕಿ ಮಂಗಳವಾರ ರಾತ್ರಿ ಆತನ ಮನೆಗೆ ದೂರವಾಣಿ ಕರೆ ಮಾಡಿ ಮಜೀದ್ ಹತ್ಯೆಗೀಡಾಗಿರುವ ವಿಚಾರವನ್ನು ತಿಳಿಸಿದ್ದಾನೆ ಎಂದು ಆಂಗ್ಲ ದೈನಿಕವೊಂದು ವರದಿ ಮಾಡಿದೆ.