27-April-6

ಕಟೀಲು: ಯಕ್ಷಗಾನ ನಶಿಸಿಹೋಗುವ ಕಲೆಯಲ್ಲ ಅದು ಶಿಷ್ಟ ಪರಂಪರೆಯ ಕಲೆ ಎಂದು ಕಟೀಲು ದೇವಸ್ಥಾನದ ಅರ್ಚಕ ಕೆ. ಲಕ್ಷ್ಮೀ ನಾರಾಯಣ ಆಸ್ರಣ್ಣ ಬಣ್ಣಿಸಿದ್ದಾರೆ.

ಇಲ್ಲಿನ ಸಿತ್ಲ ಬೈಲಿನಲ್ಲಿ ಕೀರ್ತಿ ಶೇಷ ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣ ಸಮಿತಿ ಮುಂಬಯಿ ಹಾಗೂ ದುಬೈ ಆಶ್ರಯದಲ್ಲಿ ಶ್ರೀಧರ್ಮಸ್ಥಳ ಮಂಜುನಾಥ ಕೃಪಾಪೋಷಿತ ಯಕ್ಷಗಾನ ಬಯಲಾಟ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ಈ ಕಲೆಯ ಮೂಲಕ ಜನರಲ್ಲಿ ಧಾರ್ಮಿಕತೆ, ಪುರಾಣ ಜ್ಞಾನ, ಸನ್ನಡೆತೆ, ಸನ್ಮಾರ್ಗದಲ್ಲಿ ಸುಸಂಸ್ಕೃತರನ್ನಾಗಿಸಲು ಸಾಧ್ಯವಿದೆ ಎಂದರು.

ಈ ವೇಳೆ ಮೇಳದ ಹಿರಿಯ ಕಲಾವಿದ ಕುಂಬಳೆ ಶ್ರೀಧರ ರಾವ್‌, ವಸಂತ ಕಾರ್ಯತಡ್ಕ , ನಾಟಕಕಾರ ಅರವಿಂದ ಬೋಳಾರು, ನೇಪಥ್ಯ ಕಲಾವಿದ ಪದ್ಮಯ್ಯ ಗೌಡ ಅವರನ್ನು ಸಮ್ಮಾನಿಸಲಾಯಿತು.

ಸಭೆಯಲ್ಲಿ ಕಟೀಲ್ ಅರ್ಚಕ ಹರಿನಾಯಣ ದಾಸ ಆಸ್ರಣ್ಣ , ಉದ್ಯಮಿಗಳಾದ ಉದ್ಯಮಿ ಆನಂದ ಡಿ. ಶೆಟ್ಟಿ ಎಕ್ಕಾರು, ಯಾದವ ಕೃಷ್ಣ ಶೆಟ್ಟಿ ಶಿಬರೂರು, ಸಂತೋಷ್‌ ಶೆಟ್ಟಿ ಕಿಲೆಂಜೂರು, ಸಂಘಟಕ ಪದ್ಮನಾಭ ಕಟೀಲು, ಹರಿಣಾಕ್ಷಿ ಪದ್ಮನಾಭ ಮತ್ತಿತರರು ಉಪಸ್ಥಿತರಿದ್ದರು.

 

 

By suddi9

Leave a Reply

Your email address will not be published. Required fields are marked *