ಕಲ್ಲಡ್ಕ: ರಾಷ್ಟ್ರೀಯತೆ ನಾಯಕತ್ವ ಗುಣಗಳನ್ನು ಬೆಳೆಸುವುದು ವಿದ್ಯಾಕೇಂದ್ರದ ಉದ್ದೇಶ ಹಾಗೂ ಸತ್ ಚಾರಿತ್ರ್ಯದಿಂದ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಸಾಧ್ಯವೆಂದು ಡಾ| ಪ್ರಭಾಕರ್ ಭಟ್ ಹೇಳಿದರು .
ಅವರು ಕಲ್ಲಡ್ಕ ಶ್ರೀರಾಮ ಪದವಿಪೂರ್ವಕಾಲೇಜು ಇತ್ತಿಚೇಗೆ ನಡೆದ 2017-18ನೇ ಸಾಲಿನ ಶೈಕ್ಷಣಿಕ ವರ್ಷದ ಬೀಳ್ಕೊಡುಗೆ ಸಮಾರಂಭದ ದೀಪಪ್ರದಾನ ಕಾರ್ಯಕ್ರಮದಲ್ಲಿ ,ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಬಿಜೆಪಿ ವೈದ್ಯಕೀಯ ಪ್ರಕೋಷ್ಠ, ದ.ಕಜಿಲ್ಲೆಯ ಸಹಸಂಚಾಲಕರಾದ ಡಾ| ಸುಧೀರ್ ಹೆಗ್ಡೆ ಮಾತನಾಡಿ ವಿದ್ಯಾರ್ಥಿಗಳು ತಮ್ಮಆಸಕ್ತಿಯ ವಿಷಯದಲ್ಲಿ ಕಾರ್ಯೋನ್ಮುಖರಾಗುವುದರಿಂದ ಯಶಸ್ಸು ಸಾಧ್ಯಎಂದರು. ಹಾಗೆಯೇ ಸತೀಶ್ ಶುಗರ್ ಪ್ರೈ.ಲಿಮಿಟೆಡ್, ಗೋಕಾಕ್ನ ಮ್ಯಾನೇಜಿಂಗ್ ಡೈರೆಕ್ಟರಾದ ಶ್ರೀ ಸಿದ್ಧಾರ್ಥ ವಡೆನ್ನಾವರ್ ವಿದ್ಯಾರ್ಥಿಗಳು ಬೆಳಕು ಇದ್ದಂತೆ ತಮ್ಮನ್ನು ಬೆಳಗಿಸಿ ಸುತ್ತಲಿನವರ ಜ್ಞಾನಕ್ಕೆ ದಾರಿದೀಪವಾಗಬೇಕೆಂದು ಆಶಿಸಿದರು.
ವೇದಿಕೆಯಲ್ಲಿಡಾ| ಕಮಲಾ ಪ್ರಭಾಕರ್ ಭಟ್ಕಲ್ಲಡ್ಕ, ಸಂಸ್ಥೆಯ ಸಂಚಾಲಕರಾದಶ್ರೀ ವಸಂತ ಮಾಧವ ಉಪಸ್ಥಿತರಿದ್ದರು.
ವೇದಿಕೆಯಲ್ಲಿದ್ದ ಹಿರಿಯರಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಿಲಕಧಾರಣೆ ಧರಿಸಿ, ಭಾರತ ಮಾತೆಗೆ ಪುಷ್ಪಾರ್ಚಣೆಗೈದು ತಮ್ಮ ಎರಡು ವರ್ಷದ ಅನಿಸಿಕೆಯನ್ನು ಹಂಚಿಕೊಂಡರು. ಪ್ರಾಚಾರ್ಯರಾದ ವಸಂತ ಬಲ್ಲಾಳ್ ಸ್ವಾಗತಿಸಿ ಕುಮಾರಿ ಸ್ಫೂರ್ತಿ ವಂದಿಸಿ ರಂಜನ್ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
