ಕಲ್ಲಡ್ಕ: ಭಾರತೀಯ ಸಂಸ್ಕೃತಿ ಪ್ರಪಂಚದ ಉಳಿದ ಸಂಸ್ಕೃತಿಗಿಂತ ವಿಭಿನ್ನವಾಗಿದೆ.ಭಾರತೀಯ ಸಂಸ್ಕೃತಿಯು ಪ್ರಪಂಚದ ಕೇವಲ ಬಾಹ್ಯವಿಚಾರಗಳ ಬಗ್ಗೆ ಯೋಚಿಸದೇಆಂತರಿಕ ಸತ್ಯದ ಹುಡುಕಾಟ ನಡೆಸುತ್ತದೆ.ಆದುದರಿಂದ ನಮ್ಮ ಸಂಸ್ಕೃತಿ ನಿತ್ಯ ನಿರಂತರ ಹರಿಯುವಿಕೆಯ ಪ್ರಕ್ರಿಯೆಯನ್ನು ಹೊಂದಿದೆ.ಇಂತಹ ಭಾರತೀಯ ಸಂಸ್ಕೃತಿಯ ಮೂಲ ವಿಚಾರಗಳ ಜೊತೆಗೆ ಶಿಕ್ಷಣ ನೀಡುವಕಾರ್ಯ ವಿವೇಕಾನಂದ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಸ್ಥೆಗಳು ನೀಡುತ್ತಿದೆ. ಆದುದರಿಂದ ಸಂಸ್ಥೆಯ ಶಿಕ್ಷಕ ಮಗುವಿಗೆ ಕೇವಲ ವಿಷಯ ಹೇರುವ ಕಾರ್ಯನಡೆಸದೇ ಮಗುವಿನ ಅಂತರಂಗ ಅರಿತು ಮಗುವಿಗೆ ಬದುಕಿನ ದಿಕ್ಕು ತೋರಿಸುವ ಕಾರ್ಯ ನಡೆಸಬೇಕು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಡಾ| ಪ್ರಭಾಕರ ಭಟ್ ಹೇಳಿದರು.
ಅವರು ಶುಕ್ರವಾರ ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ನಡೆದ ವಿವೇಕಾನಂದ ಮತ್ತು ಶ್ರೀರಾಮ ವರ್ತುಲಗಳ ಶೈಕ್ಷಣಿಕ ಕಾರ್ಯಾಗಾರದಉದ್ಘಾಟನಾ ಸಮಾರಂಭದಅಧ್ಯಕ್ಷತೆ ವಹಿಸಿ ಮಾರ್ಗದರ್ಶನ ನೀಡಿದರು.
ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಹಸಂಚಾಲಕರಾದ ಶ್ರೀ ರಮೇಶ್ಎನ್, ಶ್ರೀರಾಮ ಪ್ರೌಢಶಾಲಾ ಮುಖ್ಯಶಿಕ್ಷಕಿಯಾದ ಶ್ರೀಮತಿ ವಸಂತಿ, ಶ್ರೀರಾಮ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಾದ ಶ್ರೀ ರವಿರಾಜ್ಕಣಂತೂರು, ಶ್ರೀಮತಿ ಗಂಗಾ ಮಾತಾಜಿ, ಶಿಕ್ಷಕಿ ಶ್ರೀದೇವಿ ಪ್ರೌಢಶಾಲೆ ಪುಣಚ, ಶ್ರೀ ಲೋಕೇಶ್, ಮುಖ್ಯಶಿಕ್ಷಕರು, ಶ್ರೀದೇವಿ ಪ್ರಾಥಮಿಕ ಶಾಲೆ ಪುಣಚ, ಶ್ರೀಮತಿ ನಳಿನಿ ವಾಗ್ಲೆ, ವಿವೇಕಾನಂದ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ, ಶ್ರೀಮತಿ ಪುಷ್ಪಲತಾ, ಹಿರಿಯ ಶಿಕ್ಷಕಿ, ವಿವೇಕಾನಂದಆಂಗ್ಲಮಾಧ್ಯಮ ಶಾಲೆ ಪುತ್ತೂರು, ಸಂಪನ್ಮೂಲ ವ್ಯಕ್ತಿಯಾದ ಶ್ರೀ ಲೋಕಯ್ಯ ಡಿ, ಜಿಲ್ಲಾ ಕಾರ್ಯದರ್ಶಿ ವಿದ್ಯಾಭಾರತಿದ.ಕಜಿಲ್ಲೆ ಉಪಸ್ಥಿತರಿದ್ದರು.
ಶ್ರೀರಾಮ ಪ್ರೌಢಶಾಲಾ ಕಲಾಶಿಕ್ಷಕರಾದ ಶ್ರೀ ಜಿನ್ನಪ್ಪ ನಿರೂಪಿಸಿ, ಕಾರ್ಯಾಗಾರ ಸಹಸಂಯೋಜಕರಾದ ಶ್ರೀ ಚಂದ್ರಶೇಖರ ಸ್ವಾಗತಿಸಿ, ಶ್ರೀರಾಮ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರಾದ ಶ್ರೀ ಗೋಪಾಲ್ ವಂದಿಸಿದರು.
ಕಾರ್ಯಾಗಾರದಲ್ಲಿ ಮೊದಲ ಅವಧಿಯಲ್ಲಿ ವಿದ್ಯಾಭಾರತಿಯಆಶಯ-ಅನುಷ್ಠಾನದ ಬಗ್ಗೆ ವಿದ್ಯಾಭಾರತಿಯದ.ಕ.ಜಿಲ್ಲಾ ಕಾರ್ಯದರ್ಶಿಯ ಶ್ರೀ ಲೋಕಯ್ಯ ಡಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾರ್ಗದರ್ಶನ ನೀಡಿದರು.2ನೇ ಅವಧಿಯಲ್ಲಿ ಶ್ರೀ ಪ್ರದೀಪ್ ಬಿ.ಆರ್.ಸಿ ಬಂಟ್ವಾಳ ಇವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ‘ತರಗತಿಯಲ್ಲಿ ಭಾಷೆ’ ಎಂಬ ವಿಷಯದಕುರಿತು ಮಾತನಾಡಿದರು.3ನೇ ಅವಧಿಯಲ್ಲಿ ‘ಅಧ್ಯಾಪಕರ ವೈಯಕ್ತಿಕದಾಖಲೆ’ ಬಗ್ಗೆ ಶ್ರೀ ಗಂಗಾಧರ, ಸಿ.ಆರ್.ಪಿ ಮಂಚಿ ತಿಳಿಸಿದರು.
ಕಾರ್ಯಾಗಾರದಲ್ಲಿ ಶ್ರೀರಾಮ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆ, ಶ್ರೀದೇವಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಪುಣಚ, ವಿವೇಕಾನಂದಆಂಗ್ಲಮಾಧ್ಯಮ ಹಾಗೂ ಕನ್ನಡ ಮಾಧ್ಯಮ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರು ಭಾಗವಹಿಸಿದರು.
