ಕಲ್ಲಡ್ಕ: ಶ್ರೀ ರಾಮ ವಿದ್ಯಾಕೇಂದ್ರದ ವಾರ್ಷಿಕ “ಹೊನಲು ಬೆಳಕಿನ ಕ್ರೀಡೋತ್ಸವ” ವು ಡಿ. 16 ರಂದು ಹನುಮಾನ್ ನಗರ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದಲ್ಲಿ ಜರುಗಲಿದೆ.ಅಧ್ಯಕ್ಷತೆಯನ್ನು ಪತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ ಭಟ್ ವಹಿಸಲಿದ್ದಾರೆ.
ಮುಖ್ಯ ಅಥಿತಿಗಳಾಗಿ ನವದೆಹಲಿ ರಾಷ್ಟ್ರೀಯ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸಲಹೆಗಾರ ಆರ್.ಸಿ ಸಿನ್ಹ, ನವದೆಹಲಿ ತ್ರಪಾಠಿ ಗ್ರೂಪ್ಸ್ ಮಿಥಿಲೇಶ್ ಕುಮಾರ್ ತ್ರಿಪಾಠಿ,ಶಿಡ್ಲಕಟ್ಟೆ ಉದ್ಯಮಿ ಡಾ.ಎಂ ಆರ್ ಶಿವಕುಮಾರ್, ಬೆಂಗಳೂರು ಭ.ಜ.ಪ. ಅಧ್ಯಕ್ಷ ಸದಾಶಿವ, ಬೆಂಗಳೂರು ಉದ್ಯಮಿ ರಮೇಶ್ ಭಟ್,ಬೆಳಗಾವಿ ಗ್ರಾ. ಶಾಸಕ ಸಂಜಯ ಪಾಟೀಲ, ಬೆಂಗಳೂರು ಶಾಸಕ ಮುನಿಯಪ್ಪ, ಬೆಂಗಳೂರು ಉದ್ಯಮಿ ವರಪ್ರಸಾದ್ ರೆಡ್ಡಿ, ವಿದ್ಯಾಭಾರತಿ ಖೇಲ್ ಪರಿಷತ್ ರಾಷ್ಟ್ರೀಯ ಅಧ್ಯಕ್ಷ ವೇಲಾಯುಧನ್ ಕುಟ್ಟಿ,ದಕ್ಷಿಣ ಕ್ಷೇತ್ರದ ಸಂಘಟನಾ ಕಾರ್ಯದರ್ಶಿ ಗೋಪಿನಾಥನ್ ಎ.ಸಿ ಇವರುಗಳು ಭಾಗವಹಿಸಲಿದ್ದಾರೆ.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ,ಸಂಚಾಲಕ ವಸಂತ ಮಾಧವ ಉಪಸ್ಥಿತರಿರುವರು.
