ಸುದಿ9 ಮಂಗಳೂರು:34ನೇ ರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್-2014 ಉದ್ಘಾಟನೆ
ದಕ್ಷಿಣ ಕನ್ನಡ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ ಕನರ್ಾಟಕ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಶನ್
ಸಹಯೋಗದಲ್ಲಿ ಮಂಗಳಾ ಕ್ರೀಡಾಂಗಣದಲ್ಲಿ 4ದಿನಗಳ ಕಾಲ ನಡೆಯಲಿರುವ 34ನೇ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್
ಚಾಂಪಿಯನ್ಶಿಪ್-2014ನ್ನು ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು.
ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಯುವ ಉದ್ಯಮಿ ಹರ್ಷಮೊಲಿ, ಭಾರತೀಯ ಮಾಸ್ಟರ್ಸ್ ಅಥ್ಲೆಟಿಕ್ ಚೇರ್ಮೆನ್ ಟಿ.ಒ.ಜಾಕೂಬ್,
ಮಾಜಿ ಅಂತಾರಾಷ್ಟ್ರೀಯ ಕ್ರೀಡಾಪಟು ರೋಹಿತ್ ಹೆಗ್ಡೆ, ರಘು ಶೆಟ್ಟಿ, ಭಾರತೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ನ ಪ್ರಧಾನ
ಕಾರ್ಯದಶರ್ಿ ಜೇರಾಲ್ಡ್ ಡಿಸೋಜಾ,
ದ.ಕ.ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ನ ಅಧ್ಯಕ್ಷ ಕೆ.ಎಸ್.ಕೋದಂಡ ರಾಮೇ ಗೌಡ, ಜಿಲ್ಲಾ ಯುವಜನ ಸೇವಾ ಮತ್ತು
ಕ್ರೀಡಾ ಇಲಾಖೆಯ ಉಪನಿದರ್ೇಶಕ ಪಾಶ್ವನಾಥ್,
ಕ್ರೀಡಾಕೂಟದ ಸಂಘಟನಾ ಸಮಿತಿ ಅಧ್ಯಕ್ಷ ಕೆ.ತೇಜೋಮಯ ಮೊದಲಾದವರು ಉಪಸ್ಥಿತರಿದ್ದರು.
ವರ್ಣರಂಜಿತ ಮೆರವಣಿಗೆ:
ನಗರದ ಉರ್ವ ಮಾಕರ್ೆಟ್ ಬಳಿಯ ಯುಸಿಜಿ ಮೈದಾನದಿಂದ ಮಂಗಳಾಕ್ರೀಡಾಂಗಣದವರೆಗೆ ಭವ್ಯ ವರ್ಣರಂಜಿತ
ಮೆರವಣಿಗೆಯಲ್ಲಿ ಕ್ರೀಡಾಪಟುಗಳು ಹೆಜ್ಜೆ ಹಾಕಿದರು.
22ರಾಜ್ಯಗಳ 1,400 ಕ್ರೀಡಾಪಟುಗಳು ನಾಲ್ಕು ದಿನಗಳ ಕಾಲ ನಡೆಯುವ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.
ಮೆರವಣಿಗೆಯಲ್ಲಿ ಶ್ರೀಲಂಕಾ ತಂಡದ ಮೆರುಗು:
ಶ್ರೀಲಂಕಾದಿಂದ ಆಗಮಿಸಿದ ಎಂಟು ಮಂದಿಯ ಹಿರಿಯರ ತಂಡವೊಂದು ಕ್ರೀಡಾಕೂಟದಲ್ಲಿ ಭಾಗವಹಿಸಿ ಮೆರವಣಿಗೆ,
ಪಥಸಂಚಲನದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

7-4

7-2

7-3

By suddi9

Leave a Reply

Your email address will not be published. Required fields are marked *