ಬಜಪೆ: ‘ಶೈಕ್ಷಣಿಕ ಪ್ರಗತಿಯ ಮೂಲಕ ಸಾಮಾಜಿಕ ಪರಿವರ್ತನೆಗೆ ಮುಂದಾಗಿದ್ದ ಪಾಪ್ಯುಲರ್ ಜಗದೀಶ ಸಿ.ಶೆಟ್ಟಿ ಅವರು ಸಾಮಾಜಿಕ ಸಾಮರಸ್ಯಕ್ಕಾಗಿಯೂ ಮಹತ್ವ ನೀಡಿದ್ದವರು. ಸಾಮಾಜಿಕ ಧಾರ್ಮಿಕ  ಕ್ಷೇತ್ರಗಳಲ್ಲೂ ಮಾದರಿಯಾಗಿದ್ದವರು” ಎಂದು ಪಾಪ್ಯುಲರ್ ಜಗದೀಶ ಸಿ.ಶೆಟ್ಟಿ ಎಜುಕೇಶನ್ ಟ್ರಸ್ಟ್‍ನ ಗೌರವ ಟ್ರಸ್ಟಿ ಅತ್ತೂರು ಬಾಬು ಶೆಟ್ಟಿ ಅವರು ಹೇಳಿದರು.

ಅವರು ಬಂಟ್ಸ್ ಪಾಪ್ಯುಲರ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಇಲ್ಲಿ ಪಾಪ್ಯುಲರ್ ಜಗದೀಶ ಸಿ.ಶೆಟ್ಟಿ ಎಜುಕೇಶನ್ ಟ್ರಸ್ಟ್ ಬಂಟ್ಸ್ ವೆಲೇರ್ ಸೊಸೈಟಿ, ಶಾಲಾ ಶಿಕ್ಷಕ-ರಕ್ಷಕ ಸಂಘ, ವಿದ್ಯಾರ್ಥಿ ವೃಂದ ಆಶ್ರಯದಲ್ಲಿ ಜರಗಿದ ಇತ್ತೀಚೆಗೆ ನಿಧನರಾದ ಶಾಲಾ ಸ್ಥಾಪಕ ಕಾರ್ಯಾಧ್ಯಕ್ಷ ಹಾಗೂ ಸಂಚಾಲಕ ಪಾಪ್ಯುಲರ್ ಜಗದೀಶ ಸಿ.ಶೆಟ್ಟಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಭಾವಚಿತ್ರಕ್ಕೆ ಪುಪ್ಪ ನಮಾನ ಸಲ್ಲಿಸಿ ಮಾತನಾಡಿದರು.

ಟ್ರಸ್ಟ್ ನ ಉಪಾಧ್ಯಕ್ಷ ಕರುಣಾಕರ ಶೆಟ್ಟಿ, ಮುಖ್ಯ ಶಿಕ್ಷಕಿ ಸಹನಾ ಎಂ.ಫೆಹಲ್ಲವಿ ಟ್ರಸ್ಟ್‍ನ ಕಾರ್ಯದರ್ಶಿ ಗೋಪಿನಾಥ ಹೆಗ್ಡೆ, ಕೋಶಾಕಾರಿ ರತ್ನಾಕರ ಶೆಟ್ಟಿ, ಟ್ರಸ್ಟಿಗಳಾದ ಬಿ.ರಾಮಚಂದ್ರ ಶೆಟ್ಟಿ, ಅರುಣ್ ಶೆಟ್ಟಿ, ಸಂದೀಪ್ ಶೆಟ್ಟಿ, ರಘುರಾಮ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *