ಪರಂಗಿಪೇಟೆ: ಗ್ರಹಸ್ಥಾಶ್ರಮ ಧರ್ಮ ಸರಿಯಾಗಿ ಪಾಲಿಸಿದಲ್ಲಿ ಉತ್ತಮ ಸಂತಾನ ಪ್ರಾಪ್ತಿಯಾಗಿ ದೋಷ ರಹಿತ ದೇಶ ನಿರ್ಮಾಣವಾಗುತ್ತದೆ. ಪ್ರೀತಿ ವಾತ್ಸಲ್ಯದಿಂದ ಸಂಸ್ಕಾರಯುತರಾಗಿ ಮಕ್ಕಳನ್ನು ಬೆಳೆಸುವುದು ನಮ್ಮ ಕರ್ತವ್ಯ. ಭಜನೆಯಿಂದ ನಮ್ಮ ಆತ್ಮದಲ್ಲಿರುವ ದೇವರನ್ನು ಶಾಶ್ವತಗೊಳಿಸಬಹುದು. ಪ್ರತಿ ಊರಿನಲ್ಲೂ ಇಂತಹ ಭಜನಾಮಂದಿರಗಳು ನಿರ್ಮಾಣವಾಗಲಿ ಎಂದು ಶ್ರೀ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಶ್ರೀ ಶಿವಗಿರಿ ಮಠ ಕೇರಳ ಇವರು ಶ್ರೀ ರಾಮ ಮಂದಿರ ಕೊಟ್ಟಿಂಜ ಇದರ ಪ್ರತಿಷ್ಠಾ ವರ್ಧಂತಿ ಉತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿಆಶೀರ್ವಚನ ನೀಡಿದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ , ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಸುವರ್ಣ, ಉತ್ಸವ ಸಮಿತಿ ಕಾರ್ಯದರ್ಶಿ ಸಂತೋಷ್ ಎನ್ ಶೆಟ್ಟಿ ಉಪಸ್ಥಿತರಿದ್ದರು.ಉತ್ಸವ ಸಮಿತಿ ಅಧ್ಯಕ್ಷರಾದ ಸತೀಶ್ ನಾಯ್ಗ, ಸ್ವಾಗತಿಸಿದರು.ದಿನೇಶ್ ಆರ್ ಶೆಟ್ಟಿ ಕೊಟ್ಟಿಂಜ ಪ್ರಾಸ್ತಾವಿಕವಾಗಿ ಮಾತನಾಡಿದರು.ಶರತ್ ಶೆಟ್ಟಿ ವಮದಿಸಿದರು.ಕೀರ್ತಿ ರಾಜ್ ಪಡು ಕಾರ್ಯಕ್ರಮ ನಿರೂಪಿಸಿದರು.
