ಪರಂಗಿಪೇಟೆ:  ಪರಂಗಿಪೇಟೆ ರೈಲ್ವೆ ಜಾಗದಲ್ಲಿ ಸಣ್ಣ ಕೊಠಡಿ ಕಟ್ಟಿ 3ಕುಟುಂಬಗಳು ವಾಸವಾಗಿರುವ  ಜಾಗಕ್ಕೆ ಸ್ಲಂ ಮೋರ್ಚಾ ಜಿಲ್ಲಾಧ್ಯಕ್ಷರಾದ ರಮಾ ಅಮೀನ್ ಕರೆಯ ಮೇರೆಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ತುಪ್ಪೆಕಲ್ಲು  ಭೇಟಿಕೊಟ್ಟರು.

m-3

slum-1

ಅಲ್ಲಿಯ ಜನರನ್ನು ಭೇಟಿಮಾಡಿ ಅಲ್ಲಿಯ ಸಮಸ್ಯೆಯನ್ನು ಕೇಳಿದರು. ಅವರು ರೆಲ್ವೆಯವರು ಹಾಕಿರುವ ಸರ್ವೆಕಲ್ಲನ್ನು ತೋರಿಸಿದರು ಮತ್ತು ರೆಲ್ವೆ ಅವರು ಬಂದು ಈ ಜಾಗವನ್ನು ಬೀಡಬೆಕು ಎಂದು ಹೇಳಿದ್ದಾರೆ.ಈ ಜಾಗಕ್ಕೆ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಇಲ್ಲ ಎಂಬ ಇತ್ಯಾದಿ ಮಾಹಿತಿಯನ್ನು ಕೊಟ್ಟರು ಇದನ್ನು ಜಿಲ್ಲಾಧ್ಯಕ್ಷರ ಗಮನಕ್ಕೆ ತಂದು ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಿದರು.

m-2

ಈ ಸಂದರ್ಭ ಸ್ಲಂ ಮೋರ್ಚಾ ಜಿಲ್ಲಾ ಪ್ರಧಾನ ಕಾಯದರ್ಶಿ ಸಂತೋಷ್ ತುಪ್ಪೆಕಲ್ಲು, ಹಿಂದುಳಿದ ಮೋರ್ಚಾದ ಮಂಡಲ ಕಾರ್ಯದರ್ಶಿ ಅಶೋಕ್ ಕೊಟ್ಟಾರಿ, ಪಂಚಾಯತ್ ಸದಸ್ಯರಾದ ಸುಕುಮಾರ್ ಧರ್ಮಗಿರಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *