ಫರಂಗಿಪೇಟೆ: ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಮೆಮಾರ್, ಕುಂಪನಮಜಲು ಕುಡಿಯುವ ನೀರಿಗಾಗಿ ತುಂಬೆಯಿಂದ ಮಂಗಳೂರು ಮಹಾನಗರ ಪಾಲಿಕೆಗೆ ಹಾದು ಹೋದ ಪೈಪ್ ನಿಂದ ಕಳೆದ ಸಾಲಿನ ಜಿ. ಪಂ. ಸದಸ್ಯೆ ಜಯಶ್ರೀ ರವರ 20ಲಕ್ಷ ರೂಪಾಯಿಗಳ ಅನುದಾನದಿಂದ ಅಧಿಕೃತವಾಗಿ ವ್ಯವಸ್ಥೆ ಮಾಡಲಾಗಿತ್ತು.
ಆದರೆ 10 ದಿನಗಳ ಹಿಂದೆ ಏಕಾ ಏಕಿ ಪಾಲಿಕೆಯವರು ನೀರು ಸರಬರಾಜು ನಿಲ್ಲಿಸಿದ ಪರಿಣಾಮ ಪುದು ಗ್ರಾಮಕ್ಕೆ ಕುಡಿಯುವ ನೀರಿಗೆ ಬಹಳ ಕಷ್ಟ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮಸ್ಥರೆಲ್ಲಾ ಸೇರಿ ನೀರಿನ ವಿಚಾರವಾಗಿ ಸಂಸದರಿಗೆ ದೂರು ಸಲ್ಲಿಸಿದರು.

ಸಂಸದರು ಕೂಡಲೇ ಮಹಾನಗರ ಪಾಲಿಕೆ ಆಯುಕ್ತರಲ್ಲಿ ವಿಚಾರಿಸಿ ಇನ್ನು ಮೂರ್ನಾಲ್ಕು ದಿವಸದೊಳಗೆ ಸಭೆ ಕರೆದು ನೀರಿನ ಸಮಸ್ಯೆ ಬಗೆ ಹರಿಸುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ರವೀಂದ್ರ ಕಂಬಳಿ, ಪ್ರವೀಣ್ ಶೆಟ್ಟಿ ಸುಜೀರು, ದಿನೇಶ್ ಶೆಟ್ಟಿ ಕೊಟ್ಟಿಂಜ, ಅಸ್ರಫ್ ಫರಂಗಿಪೇಟೆ, ಹನೀಫ್ ಅಮೆಮಾರ್, ಸುಬ್ರಹ್ಮಣ್ಯ ರಾವ್, ಪುದು ಗ್ರಾ.ಪಂ ಸದಸ್ಯರು ಮತ್ತಿತರರು ಗ್ರಾಮಸ್ಥರೊಂದಿಗೆ ಉಪಸ್ಥಿತರಿದ್ದರು.

