ಫರಂಗಿಪೇಟೆ: ಕಾನೂನು ಮಾಪನಶಾಸ್ತ್ರ ನಿರೀಕ್ಷಕರ ಕಚೇರಿಯ ವತಿಯಿಂದ ತೂಕ ಮತ್ತು ಅಳತೆ ಸಾಧನಗಳ 2016ನೇ ಸಾಲಿನ ವಾರ್ಷಿಕ ಸತ್ಯಾಪನಾ ಮುದ್ರೆ ಶಿಬಿರವು ಫರಂಗಿಪೇಟೆಯ ಹಳೆರಸ್ತೆಯ ಸೊಸೈಟಿ ಬಳಿ ನ.22 ರಿಂದ ನ.30ರವರೆಗೆ ನಡೆಯಲಿದೆ.

legal-metrology-logo

ಫರಂಗಿಪೇಟೆ ಶಿಬಿರ ವ್ಯಾಪ್ತಿಯಲ್ಲಿನ ಫರಂಗಿಪೇಟೆ, ಮೇರಮಜಲು, ಕುರ್ನಾಡು, ಮುಡಿಪು, ಫಜೀರು, ಪುದು, ಬೆಂಜನಪದವು, ತುಂಬೆ, ಹೂಹಾಕುವ ಕಲ್ಲು, ಕೈರಂಗಳ, ಮೊಂಟೆಪದವು, ತೌಡುಗೋಳಿ, ಮೂಳುರು ವ್ಯಾಫ್ತಿಯ ವ್ಯಾಪರಸ್ಥರು ಮತ್ತು ತೂಕ ಮತ್ತು ಅಳತೆ ಸಾಧನಗಳ ಬಳಕೆದಾರರು ತಾವು ಬಳಸುವ ತೂಕ ಮತ್ತು ಅಳತೆ ಸಾಧನಗಳನ್ನು ಶಿಬಿರಕ್ಕೆ ಹಾಜರುಪಡಿಸಿ ಮುದೆ ಹಾಕಿಸುವಂತೆ ಕಚೇರಿಯ ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *