ಬಜಪೆ: ನಾಡಿನ ಪ್ರಸಿದ್ಧ ತೀರ್ಥಸ್ಥಾನಗಳಲ್ಲೊಂದಾದ ಶ್ರೀ ಕ್ಷೇತ್ರ ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಗುಹಾಲಯ ಇಲ್ಲಿ ಅ.17 ಸೋಮವಾರ ತುಲಾಸಂಕ್ರಮಣದ ಸಂದರ್ಭ ಗುಹಾಪ್ರವೇಶ ಹಾಗೂ ಗುಹಾ ತೀರ್ಥಸ್ನಾನಕ್ಕೆ ಧಾರ್ಮಿಕ ಸಾಂಪ್ರಾದಾಯಿಕ ವಿಪೂರ್ವಕ ಚಾಲನೆ ನೀಡಲಾಯಿತು.

1

ಧರ್ಮದರ್ಶಿ ಹರಿಕೃಷ್ಣ ಪೂನರೂರು ಅವರು ದೀಪ ಬೆಳಗಿಸಿ ಚಾಲನೆ ನೀಡಿದರು. ವಗ್ಗ ಮಜಲು ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳು  ಜರಗಿದವು.

17-vm-nelliteertha

ಕಿನ್ನಿಗೋಳಿ ಯುಗಪುರುಷದ ಕೆ. ಭುವನಾಭಿರಾಮ ಉಡುಪ, ದೇವಳದ ವ್ಯವಸ್ಥಾಪನ ಸಮಿತಿಯ ಪಿ. ಸುಬ್ರಾಯ ಭಟ್ ಮತ್ತಿತರು ಉಪಸ್ಥಿತರಿದ್ದರು. ಎಪ್ರಿಲ್ ತಿಂಗಳ ಮೇಷ ಸಂಕ್ರಮಣದವರೆಗೂ ನೆಲ್ಲಿತೀರ್ಥ, ಗುಹ ತೀರ್ಥಸ್ಥಾನ ಪ್ರತಿದಿನ ಬೆಳಿಗ್ಗೆ 6ರಿಂದ ಮಧ್ಯಾಹ್ನ ದೇವಳದ ಮಹಾಪೂಜೆಯವರೆಗೂ ನಡೆಯುವುದು.

By Suddi9

Leave a Reply

Your email address will not be published. Required fields are marked *