ಬಜಪೆ: ಅಕ್ಟೋಬರ್ 4ರಂದು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ವಾಸುದೇವ ಆಸ್ರಣ್ಣ ಅವರ ಮನೆಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಅ.17 ಸೋಮವಾರದಂದು ಬಂಧಿಸಲಾಗಿದೆ. ಆಯುಕ್ತರ ಕಚೇರಿಯಲ್ಲಿ ಸೋಮವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ಸೂತ್ರದಾರ ಬಿಜೈ ಕಾಪಿಕಾಡ್ ನಿವಾಸಿ 33 ವರ್ಷದ ಸುಧೀಂದ್ರರಾವ್ ಎಚ್.ಕೆ. ಯಾನೆ ಸುದೀಂದ್ರ, ಎಕ್ಕಾರು ನಿವಾಸಿಗಯಾದ 33 ವರ್ಷದ ಚಿದಾನಂದ, 35 ವರ್ಷದ ಸೂರಜ್ ಕುಮಾರ್, ಅಡ್ಯನಡ್ಕದ ನಿವಾಸಿಯಾದ 40 ವರ್ಷದ ಸುರೇಶ್ ಕುಮಾರ್, ಎಕ್ಕಾರು ದುರ್ಗಾನಗರ ನಿವಾಸಿಯಾದ 49 ವರ್ಷದ ಸದಾಶಿವ ಶೆಟ್ಟಿ ಎಂಬವರನ್ನು ಬಂಧಿಸಲಾಗಿದೆ.

02

ಬಂಧಿತರಿಂದ ಚಿನ್ನಾಭರಣಗಳನ್ನು ಮಾರಾಟ ಮಾಡಿದ 4.25 ಲಕ್ಷ ನಗದು, 3.910 ಗ್ರಾಂ ತೂಕದ ಕಟೀಲು ದುರ್ಗಾಪರಮೇಶ್ವರಿ ದೇವರ ಭಾವಚಿತ್ರವಿರುವ ಒಂದು ಪೆಂಡೆಂಟ್ ಹಾಗೂ ಆರೋಪಿಗಳು ಬಳಸಿದ ಐದು ಮೊಬೈಲ್ ಫೋನ್ ಗಳು, ಕೃತ್ಯಕ್ಕೆ ಬಳಸಿದ ಐ20 ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಚಂದ್ರಶೇಖರ್ ತಿಳಿಸಿದರು. ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳು ಭಾಗಿಯಾಗಿದ್ದು, ಅವರ ಮಾಹಿತಿ ದೊರೆತಿದೆ. ಅವರನ್ನೂ ಶೀಘ್ರದಲ್ಲೇ ಬಂಧಿಸುವುದಾಗಿ ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *