ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಆ್ಯಟೋನಿಯೋ ಗುಟ್ರೆಸ್ ಅವರನ್ನು ನೇಮಕ ಮಾಡಲಾಗಿದೆ. ಪೋರ್ಚುಗಲ್‍ನ ಮಾಜಿ ಪ್ರಧಾನಿಯಾದ ಇವರು 2017ರ ಜನವರಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದು, ಮುಂದಿನ 5 ವರ್ಷದ ಅವಧಿಯವರೆಗೂ ಇವರ ಅಧಿಕಾರವಿರುತ್ತದೆ.
193 ಸದಸ್ಯ ರಾಷ್ಟ್ರಗಳ ವಿಶ್ವಸಂಸ್ಥೆಯಲ್ಲಿ ಗುಟ್ರೆಸ್ 9ನೆಯವರಾಗಿ ಅಧಿಕಾರ ಸ್ವೀಕರಿಸಲಿದ್ದು, ಪ್ರಸ್ತುತ ಪ್ರಧಾನ ಕಾರ್ಯದರ್ಶಿಯಾದ ಬಾನ್ ಕಿ ಮೂನ್ ಅವರ ಅಧಿಕಾರಾವಧಿ ಈ ವರ್ಷದ ಡಿ.31ಕ್ಕೆ ಅಂತ್ಯಗೊಳ್ಳಲಿದೆ. 67 ವರ್ಷದ ಗುಟ್ರೆಸ್ 1995ರಿಂದ 2002ರ ಅವಧಿಯವರೆಗೆ ಪೋರ್ಚುಗಲ್‍ನ ಪ್ರಧಾನ ಮಂತ್ರಿ 2005ರಿಂದ 2015ರವರೆಗೆ ವಿಶ್ವಸಂಸ್ಥೆಯಲ್ಲಿ ನಿರಾಶ್ರಿತರಿಗಾಗಿ ಹೈಮಿಷನರ್ ಆಗಿದ್ದರು.

