ಕೈಕಂಬ: ಅಡ್ಡೂರು ಪೊನ್ನಂಗಿಲ ಶ್ರೀ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಲೋಕ ಹಿತಾರ್ಥ ಹಾಗೂ ಜನಹಿತಾರ್ಥಕ್ಕಾಗಿ ಸಾಮೂಹಿಕ ಸೀಯಾಳಭಿಷೇಕವು ಅ.15 ಸೋಮವಾರ ಜರುಗಿತು. ದೇವಳದ ಅರ್ಚಕ ನಡುಮನೆ ಚಂದ್ರಶೇಖರ ಭಟ್ ಸೀಯಾಳಾಭಿಷೇಕ ನೆರವೇರಿಸಿದರು .
ಅಡ್ಡೂರು ಶ್ರೀ ಮುಖ್ಯಪ್ರಾಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಬಾಲಕೃಷ್ಣ ರಾವ್ ನೂಯಿ , ಕೊಡಿಯಲ್ ಬೈಲ್ “ಲ್ಯಾಂಡ್ ಸ್ಕ್ವಾರ್ ” ಉದ್ಯಮಿ ದೇವಿಪ್ರಸಾದ್ ಶೆಟ್ಟಿ, ಅನಂತ್ ಭಟ್ ಪೊಳಲಿ, ಜಯಲಕ್ಷ್ಮೀ ಸುಭಾಶ್ ಕಾಂಜಿಲಕೋಡಿ, ಸತೀಶ್ ಕೋಡಿಬೆಟ್ಟು, ಪೇಮಾ ಕೃಷ್ಣ ಪೊನ್ನೆಲ, ಅಶೋಕ ಗರಡಿ, ಶ್ರತಿ ವಾಮಂಜೂರು ಉಪಸ್ಥಿತರಿದ್ದರು.













