ಬಜಪೆ:”ಸಂಪತ್ತು, ಉಳಿತಾಯ, ಸೇವೆ ಇವೆಲ್ಲವೂ ಪ್ರಸ್ತುತ ಬದುಕಿದ ಅಂಶಗಳು. ಪರಸ್ಪರ ಸಹಕಾರೀ ಮನೋಭಾವ ಅಗತ್ಯ ಎಂಬ ಸಾರಾಂಶವೂ ಇಲ್ಲಿ ಪ್ರಾಮುಖ್ಯ” ಎಂದು ಕಟೀಲು ಶ್ರೀ ದುರ್ಗಾಪರವೆುಶ್ವರೀ ದೇವಳದ ಅನುವಂಶಿಕ ಅರ್ಚಕ ಕೆ.ಲಕ್ಷ್ಮೀನಾರಯಣ ಅಸ್ರಣ್ಣ ಹೇಳಿದರು.

29 vm Karavali

29 vm Karavali (1)
ಅವರು ಶುಕ್ರವಾರ ಬಜಪೆಯ ಲಕ್ಷ್ಮೀ “ಲಾಸ ಕಟ್ಟಡದಲ್ಲಿ ದಿ ಕರಾವಳಿ ಕ್ರೆಡಿಟ್ ಕೋಪರೇಟಿವ್ ಸೊಸೈಟಿಯ 11ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.  ಬಜಪೆ ಸೈಂಟ್ ಜೋಸೆಫ್ ಚರ್ಚ್ ನ ಧರ್ಮಗುರು  ರೇ ಫಾ| ಲಿಯೋ ಲೋಬೋ ಅವರು ಬ್ಯಾಂಕ್ನ ಭದ್ರತಾ ಕೊಠಡಿ ಉದ್ಘಾಟಿಸಿ ಶುಭ ಹಾರೈಸಿದರು. ಜಿ.ಪಂ. ಸದಸ್ಯೆ ವಸಂತಿ ಕಿಶೋರ್ ಠೇವಣಿ ಪತ್ರಗಳನ್ನು ಬಿಡುಗಡೆಗೊಳಿಸಿ ಆರಂಭಿಕ 15 ಮಂದಿ ಠೇವಣಿದಾರರಿಗೆ “ತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವ”ಸಿದ್ದು ಕರಾವಳಿ ಕ್ರೆಡಿಟ್ ಕೋಪರೇಟಿವ್ ಸೊಸೈಟಿಯ ಅಧ್ಯಕ್ಷ ಎ.ಎಸ್. ವೆಂಕಟೇಶ್ ಅವರು ಮಾತನಾಡಿ – “ಕರಾವಳಿ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಹಲವು ಪ್ರಮುಖ ಶಾಖೆಗಳಿಗೆ ಸ್ವಂತ ಕಟ್ಟಡದ ವ್ಯವಸ್ಥೆಗೆ ತಯಾರಾಗಿದ್ದು ಅತೀ ಶೀಘ್ರದಲ್ಲಿ ಇನ್ನಷ್ಟು ಶಾಖೆಗಳನ್ನು ತೆರೆಯಲಿದೆ. ಎಲ್ಲರ “ತಾಸಕ್ತಿಯ ಸೇವಾ ಚಟುವಟಿಕೆಗಳಿಗೂ ಸ್ಪಂದಿಸಲಿದೆ” ಎಂದು ಹೇಳಿದರು.
ಅತ್ತಾವರ ಉಮಾಮಹೇಶ್ವರ ದೇವಳದ ಆಡಳಿತ ಮೊಕ್ತೇಸರ ಎಂ. “ಶ್ವನಾಥ್, ದ.ಕ. ಜಿಲ್ಲಾ ಗಾಣಿಗರ-ಸಪಳಿಗರ ಸಂಘದ ಅಧ್ಯಕ್ಷ ಕೆ. “ಶ್ವಾಸ್ ಕುಮಾರ್ ದಾಸ್, ಕಟ್ಟಡ ಮಾಲಿಕ ಗೋಪಾಲಕೃಷ್ಣ ಪ್ರಭು, ಸೊಸೈಟಿ ಉಪಾಧ್ಯಕ್ಕ್ಷ ರಮೇಶ್ ಮೆಂಡನ್, ನಿರ್ದೆಶಕರುಗಳಾದ ಮಾಧವ ಸುವರ್ಣ, ಸಂಕಪ್ಪ ಕರ್ಕೇರ, ಜ್ಯೋತಿ ಸಂಗಮೇಶ್ವರ, ತಿಲಕ್ರಾಜ್, ನಾರಾಯಣ ಸಪಲ್ಯ, ಕೇಶವ ಎಂ. ಭರತ್ ಕುಮಾರ್, ಪ್ರಕಾಶ್, ಬಿ.ನಾಗೇಶ್, ಎಸ್.ಶೋಭಾ, ಸುಶೀಲಾ ಅವರುಗಳು ಉಪಸ್ಥಿತರಿದ್ದರು.
ಬ್ಯಾಂಕ್ ನ  ಪ್ರಧಾನ ವ್ಯವಸ್ಥಾಪಕ ಅನಿಲ್ ಕುಮಾರ್ ಸ್ವಾಗತಿಸಿದರು. ಬಜಪೆ ಶಾಖೆಯ ಶಾಖಾಕಾರಿ ಪೂರ್ಣಿಮಾ ವಂದಿಸಿದರು. ನಿರ್ದೇಶಕ ಸಂಜೀವ ಎ. ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *