ಬಜಪೆ: ರಾಜ್ಯದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಪ್ರತಿಮೆ ಅನಾವರಣ ಕಾರ್ಯಕ್ರಮ ಮೇ7 ಶನಿವಾರ ಬೆಳಿಗ್ಗೆ 11ಕ್ಕೆ ಬಜಪೆ ಹಳೆ “ಮಾನ ನಿಲ್ದಾಣ ರಸ್ತೆಯ ಮುರನಗರ ಜಂಕ್ಷನ್ನಲ್ಲಿ ನಡೆಯಲಿದೆ.
ದ.ಕ.ಜಿಲ್ಲೆ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ದೇವರಾಜ ಅರಸು ಅವರ ಪ್ರತಿಮೆಯನ್ನು ಅನಾವಾರಣಗೊಳಿಸಲಿದ್ದಾರೆ. ಸಚಿವ ಕೆ.ಅಭಯಚಂದ್ರ ಜೈನ್ ಅವರು ಪ್ರತಿಮೆ ಮಾಲಾರ್ಪಣೆ ಮಾಡುವರು. ಶಾಸಕರಾದ ಮೊಯಿದಿನ್ ಬಾವಾ, ಜೆ.ಆರ್.ಲೋಬೋ ಮಾಜಿ ಸಚಿವರುಗಳಾದ ಬಿ.ಸುಬ್ಬಯ್ಯ ಶೆಟ್ಟಿ, ಬಿ.ಎ, ಮೊದಿನ್ ಮಂಗಳೂರು ತಾಲೂಕು ಎಪಿಎಂಸಿ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ಜಿ.ಪಂ.ಸದಸ್ಯರುಗಳಾದ ಯು.ಪಿ.ಇಬ್ರಾಹಿಂ, ವಸಂತಿ ಕಿಶೋರ್ ಕಂದಾವರ ಗ್ರಾ.ಪಂ.ಅಧ್ಯಕ್ಷೆ “ಜಯಾ ಗೋಪಾಲ್ ಸುವರ್ಣ, ಮಳವೂರು ಗ್ರಾ.ಪಂ.ಅಧ್ಯಕ್ಷ ಗಣೇಶ್ ಅರ್ಭಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ. ಎಂದು ಕಾರ್ಯಕ್ರಮ ಸಂಘಟಕ ರೋಬರ್ಟ್ ಫ್ರಾಂಕ್ಲಿನ್ ರೇಗೋ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *