ಸುದ್ದಿ9 ಕೈಕಂಬ:
ಸಮಯ ಸರಿಯಾ 6.00 ಗಂಟೆ. ಪಶ್ಚಿಮದಲ್ಲಿ ಸೂರ್ಯ ಅಸ್ತಂಗತನಾಗುತ್ತಿದ್ದಂತೆ, ಇತ್ತ ನರೇಂದ್ರ ಮೋದಿ ದೇಶದ 15ನೇ ಪ್ರಧಾನ ಮಂತ್ರಿಯಾಗಿ ಈಶ್ವರನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಮೋದಿ ಪ್ರಮಾಣ ವಚನ ಸ್ವೀಕಾರದ ಮುನ್ನ ಭಾರತದ ರಾಷ್ಟ್ರಗೀತೆ ಜನಗಣಮನ ಗೀತೆಯನ್ನು ವಾದ್ಯದ ಮೂಲಕ ನುಡಿಸಲಾಯ್ತು. ದೇಶ ವಿದೇಶಗಳಿಂದ ಆಗಮಿಸಿದ ಸಾವಿರಾರು ಗಣ್ಯರು ಭಾರತದ ರಾಷ್ಟ್ರಗೀತೆಗೆ ಎದ್ದುನಿಂತು ಗೌರವಾರ್ಪಣೆ ಸಲ್ಲಿಸಿದರು. ಬಳಿಕ ವೇದಿಕೆಗೆ ಆಗಮಿಸಿದ ನರೇಂದ್ರ ಮೋದಿ ನಾನು  ಈಶ್ವರನ ಹೆಸರಲ್ಲಿ ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣ ತೆಗೆದುಕೊಳ್ಳುತ್ತೇನೆ ಎಂದು ನುಡಿದರು.

modi prime minister
`ನಾನ  ನರೇಂದ್ರ ದಾಮೋದರ ದಾಸ್ ಮೋದಿ, ನಾನು ದೇವರ ಹೆಸರಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸುತ್ತೇನೆ, ನನ್ನ ಉದ್ದೇಶವೆಂದರೆ ದೇಶದ ಸಾರ್ವಭೌಮತ್ವ ಹಾಗೂ ಸಮಗ್ರತೆಯನ್ನು ಎತ್ತಿಹಿಡಿಯುವುದಾಗಿದೆ. ನಾನು ಭಾರತದ ಸಂವಿಧಾನದ ಮೇಲೆ ಪೂರ್ಣ ವಿಶ್ವಾಸವನ್ನು ಹಾಗೂ ಸ್ವಾಮಿ ನಿಷ್ಠೆಯನ್ನು ಹೊಂದಿದ್ದು ಈ ದೇಶದ ಪ್ರಧಾನ ಮಂತ್ರಿಯಾಗುವ ಮೂಲಕ ನನ್ನ ಕರ್ತವ್ಯವನ್ನು ನನ್ನ ಆತ್ಮಸಾಕ್ಷಿಗೆ ತಕ್ಕಂತೆ ಮಾಡುತ್ತೇನೆ. ದೇಶದ ಕಾನೂನು ಹಾಗೂ ಸಂವಿಧಾನದ ಮುಖಾಂತರ ದೇಶದ ಜನರೊಂದಿಗೆ ಪ್ರೀತಿ, ವಿಶ್ವಾಸಗಳನ್ನು ಗಳಿಸುವ ಮೂಲಕ ಯಾವುದೇ ರಾಗ-ದ್ವೇಷವಿಲ್ಲದೆ ಈ ದೇಶದ ಋಣವನ್ನು ತೀರಿಸುತ್ತೇನೆ. “… ಎಂದು ಪ್ರತಿಜ್ಞಾ ವಿಧಿ ತೆಗೆದುಕೊಂಡರು.

By suddi9

Leave a Reply

Your email address will not be published. Required fields are marked *