ನವದೆಹಲಿ ;( ಮೇ 26)ಸೋಮವಾರ ದೇಶದ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮಧ್ಯೆ, ನರೇಂದ್ರ ಮೋದಿಯ ಕ್ಯಾಬಿನೆಟ್`ನಲ್ಲಿ ಯಾರ್ಯಾರು ಸೇರುತ್ತಾರೆ ಎಂಬ ಬಗ್ಗೆ ಈಗಾಗಲೇ ಕುತೂಹಲ ಶುರುವಾಗಿದೆ. 337 ಸಂಸದರನ್ನ ಹೊಂದಿರುವ ಎನ್`ಡಿಎ ಒಕ್ಕೂಟದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಿದೆ. ಈ ಕುರಿತು ಬಿಜೆಪಿ ಹಲವು ಸುತ್ತಿನ ಸಭೆಗಳನ್ನೂ ನಡೆಸಿದೆ. ಕೆಲ ಬಿಜೆಪಿಯ ಮೂಲಗಳೇ ಹೇಳುವ ಪ್ರಕಾರ ಯಾವ್ಯಾವ ನಾಯಕರಿಗೆ ಸಚಿವ ಸ್ಥಾನ ಮತ್ತು ಯಾವ ಯಾವ ಖಾತೆ ಸಿಗಲಿದೆ ಎಂಬುದರ ಸಂಭಾವ್ಯ ಪಟ್ಟಿ ಇಂತಿದೆ.

nm

ಹಣಕಾಸು ಖಾತೆಗೆ ಹೆಚ್ಚಿದ ಲಾಬಿ: ಹಣಕಾಸು ಖಾತೆಗೆ ಬಿಜೆಪಿ ಹಿರಿಯ ನಾಯಕರಾದ ಅರುಣ್ ಶೌರಿ, ಅರುಣ್ ಜೇಟ್ಲಿ ಮತ್ತು ಸುಬ್ರಮಣಿಯನ್ ಸ್ವಾಮಿ ಮುಗಿಬಿದ್ದಿದ್ದು, ಮೂವರ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆಯಂತೆ. ಆದರೆ, ಮೋದಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅರುಣ್ ಶೌರಿ ಮತ್ತು ಅರುಣ್ ಜೇಟ್ಲಿ ಇಬ್ಬರಲ್ಲೊಬ್ಬರಿಗೆ ಹಣಕಾಸು ಖಾತೆ ಒಲಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ವಿದೇಶಾಂಗ ಖಾತೆಗೂ ಸಹ ಅರುಣ್ ಜೇಟ್ಲಿ ಹೆಸರು ಮುಂಚೂಣಿಯಲ್ಲಿದೆ.

ರಾಜನಾಥ್ ಸಿಂಗ್`ಗೆ ಗೃಹ ಖಾತೆ..?: ಇನ್ನೂ, ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿಯಾಗುವುದರಿಂದ ಹಿಡಿದು ಇಲ್ಲಿಯವರೆಗೆ ಮೋದಿ ಪರವಾಗಿ ನಿಂತ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್`ಗೆ ಗೃಹ ಖಾತೆ ಒಲಿಯವ ಸಾಧ್ಯತೆ ಇದೆ.

ಸುಷ್ಮಾ ಸ್ವರಾಜ್`ಗೆ ರಕ್ಷಣಾ ಖಾತೆ: ಬಿಜೆಪಿಯ ಮೂಲಗಳೇ ಹೇಳುವ ಪ್ರಕಾರ ಸುಷ್ಮಾ ಸ್ವರಾಜ್`ಗೆ ರಕ್ಷಣಾ ಅಥವಾ ಮಾನವ ಸಂಪನ್ಮೂಲ ಖಾತೆ ದೊರೆಯುವ ಸಾಧ್ಯತೆ ಇದೆ. ಜೊತೆಗೆ ಗೃಹ, ವಿದೇಶಾಂಗ, ಹಣಕಾಸು ಖಾತೆಯಲ್ಲೂ ಸುಷ್ಮಾ ಹೆಸರು ಕೇಳಿ ಬರುತ್ತಿದೆ.

ವೆಂಕಯ್ಯನಾಯ್ಡುಗೆ ರೈಲ್ವೆ ಖಾತೆ: ಹಿರಿಯ ನಾಯಕ ವೆಂಕಯ್ಯನಾಯ್ಡು ಹೆಸರು ರೈಲ್ವೆ ಖಾತೆಗೆ ಕೇಳಿ ಬರುತ್ತಿದೆ. ನಿತಿನ್ ಗಡ್ಕರಿಗೆ ನಗರಾಭಿವೃದ್ಧಿ ಖಾತೆ ಸಿಗುವ ಸಾಧ್ಯತೆ ಇದೆ.

ಇನ್ನೂ ಶಹನವಾಜ್ ಹುಸೇನ್ ಮತ್ತು ಮುಖ್ತಾರ್ ಅಬ್ಬಾಸ್ ನಖ್ವಿ ಸಹ ಸಂಪುಟ ಸೇರಲಿದ್ದಾರೆ ಎಂದು ಹೇಳಲಿದ್ದಾರೆ.

ಇದರ ಜೊತೆಗೆ ಮಿತ್ರಪಕ್ಷಗಳಾದ ಶಿವಸೇನಾ, ತೆಲುಗು ದೇಶಂ ಮತ್ತು ಲೋಕ ಜನಶಕ್ತಿಯಿಂದ ಕೆಲ ನಾಯಕರು ಸಂಪುಟ ಸೇರಲಿದ್ದಾರೆ ಎನ್ನಲಾಗುತ್ತಿದೆ.

By suddi9

Leave a Reply

Your email address will not be published. Required fields are marked *