ಕಿನ್ನಿಗೋಳಿ; ಬಡವರ ಬಗ್ಗೆ ವಿಶೇಷ ಕಾಳಜಿ ಹೊಂದಿದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಅನ್ನ ಬಾಗ್ಯ ದಂತಹ ಯೋಜನೆಗಳನ್ನು ಹಮ್ಮಿಕೊಂಡಿದೆ ಆದರೆ ಕಾಂಗ್ರೇಸ್ ನ ಏಳಿಗೆಯನ್ನು ಸಹಿಸದ ವಿರೋದ ಪಕ್ಷದವರು ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತಾರೆ ಎಂದು ಆರೋಪಿಸುತ್ತಿದೆ, ಹಿಂದೆ ಮುಖ್ಯಮಂತ್ರಿಗಳಾಗಿದ್ದ ಯಡ್ಯೂರಪ್ಪ,ಜಗದೀಶ್ ಶೆಟ್ಟರ್ ಮುಂತಾದವರು ಭ್ರಷ್ಟರಾಗಿದ್ದಾರೆ ಎಂದು ಸಚಿವ ಅಭಯ ಚಂದ್ರ ಜೈನ್ ಹೇಳಿದರು.
ಅವರು ಗುತ್ತಕಾಡಿನಲ್ಲಿ ನಡೆದ, ಕಿನ್ನಿಗೋಳಿಯಲ್ಲಿ ಪಂಚಾಯತ್ ಚುನಾವಣೆಯಲ್ಲಿ ಚುನಾಯಿತರಾದ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳ ಅಬಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಈ ಸಂದರ್ಭ ಕಿನ್ನಿಗೋಳಿ ಪಂಚಾಯತ್ಗೆ ಚುನಾಯಿತರಾದ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳನ್ನು ಅಭಿನಂದಿಸಲಾಯಿತು ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಸದಸ್ಸ್ಯರಾದ ರಾಜು ಕುಂದರ್,ಎ.ಪಿ.ಎಂ.ಸಿ ಸದಸ್ಸ್ಯರಾದ ಪ್ರಮೋದ್ ಕುಮಾರ್, ಹಿರಿಯ ಕಾಗ್ರೇಸಿಗರಾದ ಗುಣಪಾಲ್ ಶೆಟ್ಟಿ, ಮುಲ್ಕಿ ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷ ಅಬೂಬಕ್ಕರ್,ಕಿನ್ನಿಗೋಳಿ ಪಂಚಾಯತ್ ಮಾಜಿ ಅಧ್ಯಕ್ಷ ಶ್ಯಾಮಲ ಹೆಗ್ಡೆ, ಜಿಲ್ಲಾ ಪಂಚಾಯತ್ ಮಾಜೀ ಉಪಾಧ್ಯಕ್ಷೆ ಶಾಲೆಟ್ ಪಿಂಟೊ ಉಪಸ್ಥಿತರಿದ್ದರು. ಶರತ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು, ಟಿ.ಯಚ್ ಮಯ್ಯದ್ದಿ ಸ್ವಾಗತಿಸಿ, ಪ್ರಕಾಶ್ ಆಚಾರ್ ವಂದಿಸಿದರು.

