ಸಾಧನೆ, ಮೋದಿ ಪರಿಕಲ್ಪನೆ ಪ್ರಚಾರಕ್ಕೆ ಪೂರಕ; ಕಟೀಲ್
ಸುದ್ದಿ9 ಕಿನ್ನಿಗೋಳಿ; ಕರಾವಳಿಯ ಪ್ರಕೃತಿಯನ್ನು ಉಳಿಸುವ ಹಾಗೂ ಇಲ್ಲಿನ ಔದ್ಯೋಗಿಕ ನೆಲೆಯನ್ನು ಗಟ್ಟಿಗೊಳಿಸುವ ತಂತ್ರಜ್ಞಾನದ ಕೇಂದ್ರಗಳ ಯೋಜನೆಗಳು ಜಿಲ್ಲೆಗೆ ಸ್ವಾಗತಿಸೋಣ ಬದಲಾಗಿ ಕರಾವಳಿಯನ್ನೇ ರುದ್ರಭೂಮಿಯನ್ನಾಗಿ ಮಾಡುವ ಯಾವುದೇ ಯೋಜನೆಗೂ ಸ್ಪಷ್ಟ ವಿರೋಧವಿದೆ, ಇದರಿಂದ ರೈಲ್ವೇ ಹಾಗೂ ವಿಮಾನ ನಿಲ್ದಾಣಗಳು ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಯಲು ಅಭಿವೃದ್ಧಿ ಕಾಣಲು ಸಾಧ್ಯವಿದೆ ಇದೇ ನರೇಂದ್ರ ಮೋದಿಯ ಪರಿಕಲ್ಪನೆಯು ಆಗಿದೆ. ನನ್ನ ಐದು ವರ್ಷದ ಸಾಧನೆಯೂ ಈ ಬಾರಿಯ ಪ್ರಚಾರಕ್ಕೆ ಪೂರಕವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಭ್ಯರ್ಥಿ ನಳಿನ್  ಕುಮಾರ್  ಕಟೀಲು ಹೇಳಿದರು.
ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಶುಕ್ರವಾರ ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

kinigoli mhahila samavesa udgatane
kinigoli mhahila samavesa udgatane

ನಾನು ವಿರೋಧಿಗಳ ಯಾವುದೇ ಟೀಕೆಗೂ ಉತ್ತರಿಸುವುದಿಲ್ಲ ಬದಲಾಗಿ ನನ್ನ ಪ್ರಾಮಾಣಿಕತೆಯನ್ನು ಹಾಗೂ ಸಜ್ಜನ ರಾಜಕಾರಣವನ್ನು ಮಾತ್ರ ಈ ಬಾರಿ ಜನರ ಮುಂದಿಟ್ಟಿದ್ದೇನೆ, ಯೋಜನೆಗಳನ್ನು ಅನುಷ್ಠಾನ ತಂದು ರಾಜ್ಯದ ಅಗ್ರಸ್ಥಾನದ ಸಂಸದನಾಗಿರುವ ಸ್ಥಾನದಲ್ಲಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಭಾವನೆ ಮೂಡಿದೆ ಸಂಸತ್ನಲ್ಲಿ 283 ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದಿರುವ ತನಗೆ ಕರಾವಳಿ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸಿದ ಸಾರ್ಥಕ ಭಾವನೆ ಇದ್ದು. ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಿ ಇನ್ನಷ್ಟು ಅಭಿವೃದ್ಧಿಗೆ ಪೂರಕವಾಗಿ ಬಿಜೆಪಿಯನ್ನು ಮಹಿಳೆಯರು ಬೆಂಬಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಮೆನ್ನಬೆಟ್ಟು ಗ್ರಾ.ಪಂ.ನ ಮಾಜಿ ಅಧ್ಯಕ್ಷೆ ಜೆಡಿಎಸ್  ಸಾವಿತ್ರಿ ಶೆಟ್ಟಿ, ನಿಡ್ಡೋಡಿ ಜೆಡಿಎಸ್ ಸುಜಾತ, ಕಾಂಗ್ರೆಸ್ ರುಕ್ಮಿಣಿ ಬಿಜೆಪಿ ಪಕ್ಷಕ್ಕೆ ಸೇರಿಕೊಂಡರು ಅವರನ್ನು ಚಿತ್ರನಟಿ ಹಾಗೂ ಬಿಜೆಪಿ ನಾಯಕಿ ತಾರಾರವರು ಪಕ್ಷದ ಧ್ವಜ ನೀಡಿ ಬರಮಾಡಿಕೊಂಡು ತುಳುವಿನಲ್ಲಿಯೇ ಆರಂಭದಲ್ಲಿ ಮಾತನಾಡಿ ವಾಜಪೇಯಿ ಸಕರ್ಾರ ವಿದ್ದಾಗ ಅಡುಗೆ ಅನಿಲ ಸಹಿತ ಅವಶ್ಯಕ ವಸ್ತುಗಳು ಕೈಗೆಟುಕುವ ದರದಲ್ಲಿ ಸಿಗುತ್ತಿತ್ತು. ಆದರೆ ಇಂದು ಗಗನಕ್ಕೇರಿರುವ ಬೆಲೆಯಿಂದ ಮಹಿಳೆಯು ಕಂಗಾಲಾಗಿದ್ದಾರೆ. ರಾಜ್ಯದಲ್ಲಿ ನಡೆದ ಬೆಂಗಳೂರಿನ ಎಟಿಎಂನಲ್ಲಿ ಮಹಿಳೆಗೆ ಹಲ್ಲೆ, ಮಣಿಪಾಲ, ದೇರಳಕಟ್ಟೆ ಪ್ರಕರಣದಲ್ಲಿ ವಿದ್ಯಾಥರ್ಿನಿಗೆ ನ್ಯಾಯ ಎಂಬುದು ಇನ್ನೂ ಸಿಕ್ಕಿಲ್ಲ ಇದು ಆಡಳಿತ ವೈಫಲ್ಯಕ್ಕೆ ಸ್ಪಷ್ಟ ಕಾರಣವಾಗಿದೆ ಎಂದು ಹೇಳಿದರು.
ಬಿಜೆಪಿ ಕ್ಷೇತ್ರದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ವಿಧಾನ ಪರಿಷತ್ತಿನ ಸದಸ್ಯರಾದ ಮೋನಪ್ಪ ಭಂಡಾರಿ, ಗಣೇಶ್ ಕಾಣರ್ಿಕ್, ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ ಸಿಂಹ ನಾಯಕ್, ಕೊಡೆತ್ತೂರು ಭುವನಾಭಿರಾಮ ಉಡುಪ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ದೇವಪ್ರಸಾದ ಪುನರೂರು, ನಾಗರಾಜ ಪೂಜಾರಿ, ಕೆ.ಪಿ.ಜಗದೀಶ ಅಧಿಕಾರಿ, ಸುಲೋಚನ್ ಭಟ್, ಕಸ್ತೂರಿ ಪಂಜ, ಲೀಲಾ ಬಂಜನ್, ಜಯಲಕ್ಷ್ಮೀ ಶೆಟ್ಟಿಗಾರ್, ಪ್ರವಿತಾ ಈಶ್ವರ ಕಟೀಲು, ಕೆ.ಆರ್.ಪಂಡಿತ್,ಮಾಜಿ ಸಚಿವ ನಾಗರಾಜ ಶೆಟ್ಟಿ, ಈಶ್ವರ ಕಟೀಲು, ಮೂಲ್ಕಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಬಂಗೇರ, ಆಶಾ ರತ್ನಾಕರ ಸುವರ್ಣ, ಪ್ರಭು ಮಾಲಿನಿ, ವಜ್ರಾಕ್ಷಿ ಶೆಟ್ಟಿ, ರಿತೇಶ್ ಶೆಟ್ಟಿ, ಸುನಿತಾ ಸುಚರಿತ ಶೆಟ್ಟಿ ಹಾಜರಿದ್ದರು.
ಈ ಮೊದಲು ನಳಿನ್ಕುಮಾರ್ರವರು ಕಟೀಲು ಕ್ಷೇತ್ರದಲ್ಲಿ ಚಂಡಿಕಾಯಾಗ ನಡೆಸಿ, ಎಕ್ಕಾರು ನಿತಿನ್ ಹೆಗ್ಡೆಯವರ ಕಾವರ ಮತೆತನದ ದೈವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.ರಾಹುಲ್ನನ್ನು ಹಿಂದಿಕ್ಕಿದ್ದೇನೆ…
ರಾಷ್ಟ್ರದ ಸಂಸದರ ಸಾಧನೆಯ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದು ಸಮೀಕ್ಷೆ ನಡೆಸಿದಾಗ ತನಗೆ 24 ನೇ ಸ್ಥಾನ ಸಿಕ್ಕಿದ್ದು ಕಾಂಗ್ರೆಸ್ ರಾಹುಲ್ ಗಾಂಧಿಗೆ  24 ನೇ ಸ್ಥಾನದಲ್ಲಿದ್ದಾರೆ ಎಂದು ನಳಿನ್ ಕುಮಾರ್  ಕಟೀಲು ತಮ್ಮ ಭಾಷಣದಲ್ಲಿ ಹೇಳಿದರು.
ವರದಿ ;;ನರೇಂದ್ರಕೆರೆಕಾಡ್

By suddi9

Leave a Reply

Your email address will not be published. Required fields are marked *