ದೆಹಲಿ: ಮಂಗಳವಾರ ಐಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ಕುರಿತ ವಿಚಾರಣೆಯ ಸಮಯದಲ್ಲಿ ಮ್ಯಾಚ್ ಪಿಕ್ಸಿಂಗ್ ಹಗರಣದ ಪ್ರಾಮಾಣಿಕ ತನಿಖೆ ನಡೆಸುವ ದೃಷ್ಠಿಯಿಂದ ಎನ್. ಶ್ರೀನಿವಾಸನ್ ಕೂಡಲೆ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕೆಂದು ಸುಪ್ರೀ ಕೋರ್ಟು ಆದೇಶಿಸಿದೆ.

ಮ್ಯಾಚ್ ಫಿಕ್ಸಿಂಗ್ ಕುರಿತು ಮುದ್ಗಲ್ ಸಮಿತಿ ನೀಡಿದ ವರದಿಯನ್ನು ವಿಚಾರಣೆಗೆ ತೆಗೆದುಕೊಂಡ ಅಪೆಕ್ಸ್ ಕೋರ್ಟು ವರದಿಯು ಆಘಾತಕಾರಿಯಾಗಿದ್ದು ಶ್ರೀನಿವಾಸನ್ ಕೂಡಲೇ ತಮ್ಮ ಹುದ್ದೆಯಿಂದ ಕೆಳಗಿಳಿಯಬೇಕು ಎಂದು ಸೂಚಿಸಿತು. ಮುದ್ಗಲ್ ವರದಿಯಲ್ಲಿ ಶ್ರೀನಿವಾಸನ್ ಅಳಿಯ ಗುರುನಾಥ್ ಮೇಯಪ್ಪನ್ ಕೇವಲ ಕ್ರಿಕೆಟ್ ಆಸಕ್ತನಲ್ಲದೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲಕ ಕೂಡಾ ಆಗಿದ್ದರು. ಆತ ಕೇವಲ ಬೆಟ್ಟಿಂಗ್ ನಡೆಸಿದ್ದು ಮಾತ್ರವಲ್ಲದೆ ಪಂದ್ಯದ ಹಲವು ಮಾಹಿತಿಗಳನ್ನು ಇತರರಿಗೆ ರವಾನಿಸಿದ್ದರು ಎಂದು ತಿಳಿಸಲಾಗಿತ್ತು. ಸದ್ಯ ದೇಶದ ಸವರ್ೋಚ್ಛ ನ್ಯಾಯಾಲಯದ ತಪರಾಕಿ ನಂತರವಾದರೂ ಶ್ರೀನಿವಾಸನ್ ಸವರ್ಾಧಿಕಾರದಿಂದ ಬಿಸಿಸಿಐ ಮುಕ್ತವಾಗುವುದೇ ಕಾದು ನೋಡಬೇಕು.

