ಕಿನ್ನಿಗೋಳಿ: ಉರುಳಿಗೆ ಸಿಕ್ಕು ಒದ್ದಾಟ ನಡೆಸುತ್ತಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಕೊನೆಗೂ ಉರುಳಿನಿಂದ ಬಿಡಿಸಿ ಬೋನಿಗೆ ತುಂಬಿಸುವಲ್ಲಿ ಯಶಸ್ವಿಯಾಗಿದ್ದು, ಪಿಲಿಕುಳ ನಿಸರ್ಗಧಾಮಕ್ಕೆ ಒಪ್ಪಿಸಲಾಗಿದೆ.

chirate2

chirate3

chirate4

chirate5

chirate6

chirate1ಕಿನ್ನಿಗೋಳಿಯ ಏಳಿಂಜೆ ಸಮೀಪದ ಶುಂಠಿಪಾಡಿ ಎಂಬಲ್ಲಿ ಚೆರತೆಯೊಂದು ಉರುಳಿಗೆ ಸಿಕ್ಕಿ ಹಾಕಿಕೊಂಡಿತ್ತು. ಶುಂಠಿಪಾಡಿ ನಿವಾಸಿ ಶರತ್ ಶೆಟ್ಟಿ ಅವರು ಸಮೀಪದ ಗುಡ್ದಕ್ಕೆ ತೆರಳಿ ನೋಡಿದಾಗ ಚಿರತೆ ಉರುಳಿಗೆ ಸಿಕ್ಕು ಒದ್ದಾಡುತ್ತಿರುವುದನ್ನು ಸ್ಥಳೀಯ ನಿವಾಸಿ ಅಣ್ಣು ಮೂಲ್ಯ ಎಂಬವರು ದನಕಟ್ಟಲು ಹೋಗಿದ್ದಾಗ ಗಮನಿಸಿದ್ದರು. ಈ ಬಗ್ಗೆ ಸ್ಥಳೀಯ ನಿವಾಸಿ ಸುಧಾಕರ್ ಸಾಲಿಯಾನ್ ಅವರು ಮುಲ್ಕಿ ಪೆÇೀಲೀಸ್ ಠಾಣೆ ಮತ್ತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು, ಕೂಡಲೇ ಕಿನ್ನಿಗೋಳೀ ಅರಣ್ಯಾಧಿಕಾರಿ ಪರಮೇಶ್ವರ್ ತಮ್ಮ ಸಿಂಬಂದ್ದಿಯೊದಿಗೆ ಭೇಟಿ ನೀಡಿ ಪರೀಶೀಲಿಸಿ, ನಂತರ ಮೂಡಬಿದ್ರೆ ವಲಯ ಅರಣ್ಯಾಧಿಕಾರಿಕಾದ ಜಿ.ಡಿ ದೀನೇಶ್ ರವರಿಗೆ ಮಾಹಿತಿ ನೀಡಿದರು,.
ಪಿಲಿಕುಳದ ಅರಿವಳಿಕೆ ತಜ್ಜರು ಮತ್ತು ವೈದ್ಯರೊಂದಿಗೆ ಮೂಡಬಿದ್ರೆ ಅರಣ್ಯಾಧಿಯವರು ಸ್ಥಳಕ್ಕೆ ಬೇಟಿ ನೀಡಿ ಚಿರತೆಗೆ ಅರಿವಳಿಕೆ ಮದ್ದು ನೀಡಿ ಅದನ್ನು ಸುರಕ್ಷಿತವಾಗಿ ಹಿಡಿಯದು ಬೋನಿನೊಳಗೆ ಹಾಕಲಾಯಿತು. ಇದು ಸುಮರು 6 ಅಡಿ ಉದ್ದ ಮತ್ತು 3 ಅಡಿ ಎತ್ತರದ ಗಂಡು ಚಿರತೆಯಾಗಿದೆ. ಈ ಚಿರತೆಯನ್ನು ಪಿಲಿಕುಳಕ್ಕೆ ರವಾಣಿಸಲಾಗಿದೆ. ಪಿಲಿಕುಳದ ಡಾ.ದಿಲೀಪ್, ಡಾ.ವಿಕ್ರಮ್ ಮತ್ತು ಅರಣ್ಯ ಇಲಾಖೆಯ ಎಂ.ಬಿ ಸೇಸಪ್ಪ,ಕೆ ಶಂಕರ್, ರಮೇಶ್ ನಾಯಕ್ ಐಯಣ್ಣ, ನಾರಾಯಣ್ ರಂಜನ್ ಮುಂತಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

By Suddi9

Leave a Reply

Your email address will not be published. Required fields are marked *