ಬಜಪೆ : ಬಜಪೆ ಸುಂಕದಕಟ್ಟೆಯ ಪ್ರತಿಭಾವಂತ ಅವಳಿ ಸೋದರಿಯರಾದ ಶ್ರೇಯಾ ಎಸ್. – ಶ್ರಾವ್ಯ ಎಸ್. ಅವರು ಇತ್ತೀಚೆಗೆ ಮಲೇಷ್ಯಾದ ಕೌಲಾಲಂಪುರದಲ್ಲಿ 3ನೇ ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನದಲ್ಲಿ ಅದ್ಭುತ ಭರತನೃತ್ಯ ಪ್ರದರ್ಶನದೊಂದಿಗೆ ಗಮನ ಸೆಳೆದಿದ್ದು ರಾಷ್ಟ್ರಮಟ್ಟದ *ನೃತ್ಯಶ್ರೀ* ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.

ಇವರು ನೃತ್ಯ ಭಾರತಿ ಸಂಸ್ಥೆಯ ಗುರುಗಳಾದ ವಿದುಷಿ ಗೀತಾ ಸರಳಾಯ – ವಿದುಷಿ ರಶ್ಮಿ ಚಿದಾನಂದ -ವಿದುಷಿ ರಮ್ಯ ರಾವ್ ಅವರ ನೇತೃತ್ವದ ತಂಡವನ್ನು ಪ್ರತಿನಿಸಿದ್ದರು. ಕೆಎಸ್ಸಾಟರ್ಿಸಿ ಉದ್ಯೋಗಿ ಶಂಕರ ಕೋಟ್ಯಾನ್ ಹಾಗೂ ಸುಂಕದಕಟ್ಟೆ ಎಸ್ ಎನ್ ಎಸ್ ಪಾಲಿಟೆಕ್ನಿಕ್ನ ಬೋಧಕರಾಗಿರುವ ಸಂಧ್ಯಾ ಕುಳಾಯಿ ದಂಪತಿಯ ಅವಳಿ ಪ್ರಕ್ರಿಯರಾಗಿರುವ ಶ್ರೇಯಾ ಎಸ್. – ಶ್ರಾವ್ಯ ಎಸ್. ಈಗಾಗಲೇ ಬೆಂಗಳೂರಿನಲ್ಲಿ ಕನ್ನಡ-ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಕನ್ನಡ ಕಲಾ ಪ್ರತಿಭೋತ್ಸವದಲ್ಲೂ ಉತ್ತಮ ಪ್ರದರ್ಶನದೊಂದಿಗೆ *ಅರಳು ಮಲ್ಲಿಗೆ* ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದರು.
ಕಟೀಲು ದೇವಳ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿರುವ ಶ್ರೇಯಾ ಎಸ್. ಹಾಗೂ ಮಂಗಳೂರು ಕೆಪಿಟಿಯಲ್ಲಿ ಸಿವಿಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಶ್ರಾವ್ಯ ಎಸ್. ಅವರುಗಳ ಶೈಕ್ಷಣಿಕ ಹಾಗೂ ಕ್ರೀಡಾ ಸಾಧನೆಯೂ ಶ್ಲಾಘನೀಯ ಎಂಬುದು ಇಲ್ಲಿ ಗಮನಾರ್ಹ. ಸ್ಥಳೀಯವಾಗಿ ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿರುವ ಈ ಅವಳಿ ಸೋದರಿಯರ ನೃತ್ಯ ಜೋಡಿಗೆ ಈಗಾಗಲೇ ನೀಡಿರುವ ಈ ಅವಳಿ ಸೋದರಿಯರ ನೃತ್ಯ ಜೋಡಿಗೆ ಈಗಾಗಲೇ ಹಲವು ಸನ್ಮಾನ-ಪುಅರಸ್ಕಾರಗಳು ಸಂದಿವೆೆ.
ಚಿತ್ರ 14 ವಿಎಂ ಶ್ರೇಯಾ-ಶ್ರಾವ್ಯ.



