ಸುದ್ದಿ9 ಬಜ್ಪೆ :ದೊಡ್ಡಿಕಟ್ಟೆ ಶ್ರೀ ಸ್ವಯಂ ಭೂಲಿಂಗೇಶ್ವರ ಕ್ಷೇತ್ರದಲ್ಲಿ ಫೆ.17ರಂದು ಮಹಾಶಿವರಾತ್ರಿ ಪ್ರಯುಕ್ತ ನಾನಾ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮ ನಡೆಯಲಿವೆ. ಬೆಳ್ಳಗ್ಗೆ 6.25ಕ್ಕೆ ಗಣಪತಿ ಹೋಮ, 8.30ಕ್ಕೆ ಮಹಾ ಮೃತ್ಯಂಜಯ ಹೋಮ, ಸಾಮೂಹಿಕ ಶತರುದ್ರಾಭಿಷೇಕ, ಪಂಚಾಮೃತಾಭಿಷೇಕ, ಶತ ನಾರಿ ಕೇಳ ಅಭಿಷೇಕ, ಬೆಳ್ಳಗ್ಗೆ 10ರಿಂದ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5ರಿಂದ ನಾನಾ ಮಂಡಳಿಗಳಿಂದ ಭಜನೆ, ರಾತ್ರಿ ರಂಗ ಪೂಜೆ, ರಾತ್ರಿ 9.30ರಿಂದ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ಯಕ್ಷಗಾನ ಮಂಡಳಿ ಅವರಿಂದ “ಪಾತಾಳ ಭೈರವಿ” ಯಕ್ಷಗಾನ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಎಲ್.ವಿ.ಅಮೀನ್ ತಿಳಿಸಿದ್ದಾರೆ.
download

By Suddi9

Leave a Reply

Your email address will not be published. Required fields are marked *