ಬಜಪೆ : ಸಾರ್ವಜನಿಕ ಸ್ಥಳಗಳಲ್ಲಿ ಅಹಿತಕರ ಘಟನೆಗಳನ್ನು ನಿಯಂತ್ರಿಸುವ ಹಾಗೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ವ್ಯಕ್ತಿಗಳನ್ನು ಪತ್ತೆಹಚ್ಚುವ ಉದ್ದೇಶದಿಂದ ಮುಖ್ಯ ರಸ್ತೆಯ ಎಲ್ಲೆಡೆ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಬಗ್ಗೆ ಈಗಾಗಲೇ ಯೋಜನೆ ರೂಪಿಸಲು ಚಿಂತನೆ ನಡೆದಿದೆ . ಎಂದು ಬಜಪೆ ಪೊಲೀಸ್ ಇನ್ಸ್ಪೆಕ್ಟರ್ ನರಸಿಂಹ ಮೂರ್ತಿ ಹೇಳಿದರು.

ಅವರು ಕೆಂಜಾರಿನಲ್ಲಿ ಬಜಪೆ ಪೊಲೀಸರ ವಿನಂತಿ ಮೇರೆಗೆ ವಿಮಾಣ ನಿಲ್ದಾಣ ಪಕ್ಕದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಕೊಡುಗೆಯಾಗಿ ಏರ್ಕೆಟರಿಂಗ್ ಸಂಸ್ಥೆ, *ಕಾಫ್* ಸಂಸ್ಥೆ ನೀಡಿದ್ದು ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಮಾನ ನಿಲ್ದಾಣ ನಿರ್ದೇಶಕ ಜೆ. ಡಿ. ರಾಧಾಕೃಷ್ಣ ಅವರು ಸಿಸಿ ಕ್ಯಾಮರಾದ ಕಂಟ್ರೋಲ್ ಯೂನಿಟ್ಗೆ ಚಾಲನೆ ನೀಡಿ ಮಾತನಾಡಿ *ಸಾರ್ವಜನಿಕ ಸ್ಥಳದಲ್ಲಿ ಬಹುತೇಕ ಸಂಭಾವ್ಯ ಕೃತ್ಯಗಳನ್ನು ಹಿಡಿತದಲ್ಲಿಡಲು ಈ ವ್ಯವಸ್ಥೆ ಸಹಕಾರಿ* ಎಂದು ಹೇಳಿದರು.
ಕ್ಯಾಪ್ಸ್*ನ ವಿಭಾಗೀಯ ಆಡಳಿತ ನಿರ್ದೇಶಕ ಜೋರ್ಜ್ ಡೊಮೊನಿಕ್, ಸ್ಥಳೀಯ ಅಕಾರಿ ಪ್ರ್ರಾನ್ಸಿನ್ ಅರಾನ್ನ ಮುಂತಾದವರು ಉಪಸ್ಥಿತರಿದ್ದರು.
