ಬಜ್ಪೆ: ಅಂತರಾತ್ಮದಲ್ಲಿ ಭಕ್ತಿಯನ್ನು ತುಂಬಿಕೊಂಡಾಗ ದೈವತ್ವಕ್ಕೆ ತಲುಪಲು ಸುಲಭವಾಗುತ್ತದೆ ಎಂದು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅಭಿಪ್ರಾಯ ಪಟ್ಟರು
ಅವರು ಸೋಮವಾರ ಕೊಂಪದವಿನಲ್ಲಿ ನಡೆಯುತ್ತಿರುವ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತಾಡುತ್ತಿದ್ದರು.
ಮನುಷ್ಯನಿಗೆ ಧನದ ಜೊತೆಗೆ ಗುಣವೂ ಇರಬೇಕು ಆದರೆ ಭಗವಂತನಿಗೆ ಇದ್ಯಾವುದರ ಅಗತ್ಯವಿಲ್ಲ, ಭಗವಂತನನ್ನು ಆಸ್ತಿಕ ಭಾವದಿಂದ ಪೂಜಿಸಿದರೆ ಮೋಕ್ಷ ಸಾಧ್ಯ ಎಂದು ವಜ್ರದೇಹಿ ಸ್ವಾಮೀಜಿ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

DSC_0026

DSC_0017

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಆರೆಸ್ಸೆಸ್‍ನ ದಕ್ಷಿಣ ಮದ್ಯ ಕ್ಷೇತ್ರಿಯ ಸಂಪರ್ಕ ಪ್ರಮುಖ್ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಮಾತಾಡಿ, ಧರ್ಮವನ್ನು ಬಿಟ್ಟರೆ ದೇಶ ಉಳಿಯಲು ಸಾದ್ಯವಿಲ.್ಲ ಧರ್ಮದ ಕೇಂದ್ರ ಬಿಂದು ದೇವಸ್ಥಾನ. ಇಡೀ ಜಗತ್ತೇ ಒಳ್ಳೆಯದಾಗಲಿ ಎಂದು ಹೇಳುವ ಧರ್ಮ ಅದುವೇ ಹಿಂದುಸ್ತಾನ. ಹೆತ್ತವರು ತಮ್ಮ ಮಕ್ಕಳಿಗೆ ಸಂಸ್ಕøತಿಯನ್ನು ಕಲಿಸಬೇಕು ಇದರಿಂದ ಸದೃಡ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಎಲ್ಲಿಯವರೆಗೆ ನಾವು ಹೃದಯದ ಒಳಗಿನಿಂದ ದೇವರನ್ನು ಪ್ರಾರ್ಥಿಸದಿಲ್ಲವು ಅಲ್ಲಿಯವರೆಗೆ ನಮಗೆ ಯಶಸ್ಸನ್ನು ಕಾಣಲ್ಲಿಕ್ಕೆ ಸಾದ್ಯವಿಲ್ಲ ಎಂದು ಜಿ.ಪಂ ಸದಸ್ಯ ಜನಾರ್ಧನ ಗೌಡ ಹೇಳಿದರು.
ಭಗವಂತನ ಧರ್ಮ ಅದು ನಾವು ಪಡೆಯುವ ಜೀವನ ಮತ್ತು ಭಗವಂತನ್ನು ನಮ್ಮತ ಸೆಳೆಯಲು ಭಜನೆಯಿಂದ ಮಾತ್ರ ಸಾದ್ಯವಾಗುತ್ತದೆ ಎಂದು ಬ್ರಹ್ಮಶ್ರೀ ಎಡಪದವು ಬಗ್ಗಮಜಲು ಸುಬ್ರಹ್ಮಣ್ಯ ತಂತ್ರಿ ಯವರು ಹೇಳಿದರು.
ಸಭೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಸಮ್ಮಾನಿಸಲಾಯಿತು. ಅತಿಥಿಗಳಾಗಿ ಮುಚ್ಚೂರು ಗ್ರಾ.ಪಂ ಅಧ್ಯಕ್ಷರು ಪ್ರಕಾಶ್ ಹೆಗ್ಡೆ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಶಾಂತ್ ಐತಾಳ್ ಉಪಸ್ಥಿತರಿದ್ದರು. ಕೃಷ್ಣಪ್ರಸಾದ್ ಕೊಂಪದವು ಸ್ವಾಗತಿಸಿದರು, ವಿದ್ಯಾ ವಿಜಯಗೌಡ ಶಿಬ್ರಿಕೆರೆ ನಿರೂಪಿಸಿದರು, ಪ್ರಶಾಂತ್ ಐತಾಳ್ ವಂದಿಸಿದರು.

By Suddi9

Leave a Reply

Your email address will not be published. Required fields are marked *