ಗುರುಪುರ: ಗುರುಪುರದ ವಜ್ರದೇಹಿ ಮಠದಲ್ಲಿ ನಡೆದ ಜಾತ್ರೆಯ ಸಲುವಾಗಿ ಆಯೋಜಿಸಲಾಗಿದ್ದ ಸಭಾಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಮಾತಾಡುತ್ತಿದ್ದ ಯುವ ಭಾರತ್ ರಾಜ್ಯ ಪ್ರಭಾರಿ ನಿಕೆತ್ ರಾಜ್ ರಜಪೂತ ವಂಶದ ಧೀರ ಮಹಿಳೆಯೋರ್ವಳ ಕಥೆಯೊಂದನ್ನು ಹೇಳಿದರು.
ಇದು ಇತಿಹಾಸದಲ್ಲಿ ನಡೆದ ರೋಮಾಂಚನಕಾರಿ ಸತ್ಯ ಕಥೆ. ರಜಪೂತ ಮಹಿಳೆಯಾದ ಹಾಡಿ ರಾಣಿಯ ಪವಿತ್ರ ಪ್ರೇಮದ ಕಥೆ. ಆಕೆ ಎಷ್ಟು ಸುಂದರವಾಗಿದ್ದಳೆಂದರೆ ಆಕೆಯ ಬಗ್ಗೆ ಹಾಡುಗಳನ್ನು ಕಟ್ಟಿ ರಜಪೂತರೆಲ್ಲಾ ಹಾಡುತ್ತಿದ್ದರು.
ಈಕೆಯನ್ನು ಮೇವಾಡದ ಅರಸ ರಾವತ್ ಚೂಡಾವತ್ ಎನ್ನುವಾತ ಮದುವೆಯಾಗುತ್ತಾನೆ. ಈತ ಎಷ್ಟು ಸುಂದರನಾಗಿದ್ದನೋ ಅಷ್ಟೇ ಪರಾಕ್ರಮಿ. ಎಂದರೆ ಈತ ಕತ್ತಿ ಬೀಸಲು ಶುರು ಮಾಡಿದರೆ ಒಂದಷ್ಟು ದೇಶದ್ರೋಹಿಗಳ ತಲೆಯನ್ನು ಛಿದ್ರವಿಛಿದ್ರ ಮಾಡುತ್ತಿದ್ದ. ಈತನ ಪರಾಕ್ರಮದ ಬಗ್ಗೆ ರಜಪೂತರು ಬರೆದ ಕತೆಗಳು ಇಂದಿಗೂ ಜೀವಂತವಿದೆ.
ಈ ಸಂದರ್ಭದಲ್ಲಿ ಮೊಘಲ್ ದೊರೆ ಔರಂಗಜೇಬ್ ಕೂಡಾ ಆಳ್ವಿಕೆ ನಡೆಸುತ್ತಿದ್ದ. ಈತ ಶಿವಾಜಿ, ರಜಪೂತ, ಸಿಖ್ ಹಾಗೂ ಮೇವಾಡದ ದೊರೆಗಳ ವಿರುದ್ಧ ಒಮ್ಮೆಗೆ ಆಕ್ರಮಣ ಮಾಡುತ್ತಾನೆ.  ಔರಂಗಜೇಬನ ಸೈನ್ಯ ಮೇವಾಡಕ್ಕೆ ಬರುತ್ತದೆ. a

bajpe (6)

 

bajpe

bajpe (5)

 
ಆದರೆ ರಾವತ್ ಚೂಡಾವತ್ ತನ್ನ ಸುಂದರವಾದ ಪತ್ನಿಯನ್ನು ಬಿಟ್ಟು ಯುದ್ಧಕ್ಕೆ ಹೊರಡಲೇ ಇಲ್ಲ. ಇದನ್ನು ಕೇಳಿದ ಹಾಡಿರಾಣಿ ರಜಪೂತ ವಂಶಜರು ಯುದ್ಧ ಮಾಡಲೇಬೇಕು, ಒಂದು ವೇಳೆ ನೀನು ಯುದ್ಧದಲ್ಲಿ ಸತ್ತರೆ ನಾನೂ ನಿನ್ನ ಚಿತೆಗೆ ಹಾರಿ ಪ್ರಾಣ ಬಿಡುತ್ತೇನೆ ಎಂದು ಆತನನ್ನು ಹುರಿದುಂಬಿಸಿ ಕಳಿಸುತ್ತಾಳೆ. ರಾವತ್ ಈಕೆಯ ಕಾಟ ತಡೆಯಲಾರದೆ ಯುದ್ದಕ್ಕೆ ಹೊರಟುನಿಲ್ಲುತ್ತಾನೆ. ಇತ್ತ ಹಾಡಿರಾಣಿ ಗಂಡನಿಗೆ ಗೆಲುವಾಗಲಿ ಎಂದು ದೇವಿಯ ಪೂಜೆಗೆ ನಿಲ್ಲುತ್ತಾಳೆ. ಆದರೆ ರಾಜ ಪತ್ನಿಯ ಸೌಂರ್ಯಕ್ಕೆ ಮನಸೋತು ವಾಪಸ್ ಬಂದು ಅರಮನೆಯ ಬಾಗಿಲಲ್ಲಿ ನಿಂತು ನಿನ್ನ ನೆನಪಿಗೆ ಏನಾದರೂ ಕೊಟ್ಟು ಕಳಿಸು ಎಂದು  ಕೂಗಿ ಹೇಳುತ್ತಾನೆ. ಇದನ್ನು ಕಂಡು ಹಾಡಿದೇವಿ ನನ್ನ ಸೌಂದರ್ಯಕ್ಕೆ ಮನಸೋತು ರಾಜಧರ್ಮ ಮರೆತಿದ್ದಾನೆ ಎಂದು ತನ್ನ ಸೇವಕಿಯನ್ನು ಕರೆಯುತ್ತಾಳೆ. ಈ ತಟ್ಟೆಯಲ್ಲಿ ನೆನಪಿನ ಕಾಣಿಕೆ ಇದೆ ಆದರೆ ಧರ್ಮರಕ್ಷಣೆಗಾಗಿ ಯುದ್ಧ ಮಾಡು ಎಂದು ಹೇಳುವಂತೆ ಹೇಳಿ ತನ್ನ ಕತ್ತನ್ನು ಕತ್ತಿಯಲ್ಲಿ ಕಡಿದು  ತಲೆಯನ್ನು ತಟ್ಟೆಗೆ ಬೀಳುವಂತೆ ಮಾಡುತ್ತಾಳೆ.
ಸೇವಕಿ ಕಟ್ಟನ್ನು ತಂದು ರಾವತ್‍ಗೆ ನೀಡುತ್ತಾಳೆ. ರಾವತ್ ಕಟ್ಟನ್ನು ಬಿಚ್ಚಿ ನೋಡಿದಾಗ ತನ್ನ ಪತ್ನಿಯ ತಲೆಯನ್ನು ನೋಡಿ ಹೌಹಾರಿದ. ಸೇವಕಿಯಿಂದ ವಿಷಯ ಅರಿತ ರಾವತ್ ತನ್ನ ಮಡದಿಯ ತಲೆಯ ಕೂದಲಿನ ಸಹಾಯದಿಂದ ತಲೆಯನ್ನು ಸೊಂಟಕ್ಕೆ ಕಟ್ಟಿ ಯುದ್ದ ಮಾಡಿ ಔರಂಗಜೇಬನ ಸೈನ್ಯವನ್ನು ಧ್ವಂಸ ಮಾಡಿ ಯುದ್ಧ ಗೆಲ್ಲುತ್ತಾನೆ.
ತನ್ನ ಪತ್ನಿಯ ಸಾವಿನಿಂದ ಕಂಗಾಲಾಗಿದ್ದ ರಾವತ್ ತನ್ನ ತಲೆಯನ್ನೇ ತಾನ ಕಡಿದು ಅಸುನೀಗುತ್ತಾನೆ.

By suddi9

Leave a Reply

Your email address will not be published. Required fields are marked *