ಪೇಶಾವರ: ಎರಡು ದಿನಗಳ ಹಿಂದೆ ಪೇಶಾವರದ ಸೈನಿಕ ಶಾಲೆಯ 148 ಮುಗ್ಧ ಮಕ್ಕಳ ಹಣೆಗೆ ಹಾಗೂ ಕಣ್ಣಿಗೆ ಗುಂಡಿಟ್ಟು ಕೊಂದ ಬಗ್ಗೆ ಪ್ರತಿಕ್ರಿಯಿಸಿರುವ ತಾಲಿಬಾನ್ ಉಗ್ರರು ನಾವು ಶಾಲೆಯ ಎಲ್ಲಾ ಮಕ್ಕಳನ್ನು ಕೊಲ್ಲಬೇಕೆಂದು ನಿರ್ಧರಿಸಿಯೇ ಬಂದಿದ್ದೆವು. ಪಾಕ್ ನಲ್ಲಿ ಇನ್ನೂ ಹಲವಾರು ಶಾಲೆಗಳಿವೆ ಇನ್ನು ಎಲ್ಲಾ ಮಕ್ಕಳನ್ನೂ ಹೀಗೆಯೇ ಕೊಲ್ಲಬೇಕಾ ಎಂದು ಅತ್ಯಂತ ಕ್ರೂರ ರೀತಿಯಲ್ಲಿ ಪಾಕ್ ಸರಕಾರವನ್ನು ಪ್ರಶ್ನಿಸಿದೆ.

taliban

pak
ಆಡಿಟೋರಿಯಂನಲ್ಲಿದ್ದ ಎಲ್ಲಾ ಮಕ್ಕಳನ್ನು ಮುಗಿಸಬೇಕೆಂದು ಅವರಿಗೆ ಆದೇಶಿಸಲಾಗಿತ್ತು. ನಮ್ಮಲ್ಲಿ ಒಟ್ಟು 7 ಮಂದಿ ಉಗ್ರರಿದ್ದರು. ಅವರಿಗೆ ನಾವು ಕರೆ ಮಾಡಿ ಎಲ್ಲಾ ಮಕ್ಕಳನ್ನು ಮುಗಿಸಿದಿರಾ ಎಂದು ಕೇಳಿದ್ದಕ್ಕೆ ಎಲ್ಲಾ ಮಕ್ಕಳನ್ನು ಮುಗಿಸಿದ್ದೇವೆ, ರಕ್ತ ಚಿಮ್ಮಿದೆ ಎಂದು ಉತ್ತರಿಸಿದ್ದರು. ನಿಮ್ಮನ್ನು ಸೈನಿಕರು ಕೊಲ್ಲುವ ಮುನ್ನ ಆದಷ್ಟು ಮಕ್ಕಳನ್ನು ಸಾಯಿಸಿಬಿಡಿ ಎಂದು ಆದೇಶಿಸಿದ್ದೆವು ಎಂದು ದಾಳಿಕೋರರು ಸರಕಾರಕ್ಕೆ ತಿಳಿಸಿದ್ದಾರೆನ್ನಲಾಗಿದೆ.
ಸರಕಾರ ಉಗ್ರರಿಗೆ ಗಲ್ಲು ಶಿಕ್ಷೆ ವಿಧಿಸಲಿದೆ ಎಂದು ಷರೀಫ್ ಘೋಷಿಸಿರುವ ಬೆನ್ನಲ್ಲೇ ಹಲವಾರು ಉಗ್ರರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ

By suddi9

Leave a Reply

Your email address will not be published. Required fields are marked *