ಬಗ್ದಾದ್: ಉಗ್ರರ ವಶದಲ್ಲಿ ಇರಾಕ್‍ನ ಪೂರ್ವದಲ್ಲಿರುವ ದಿಯಾಲ ಪ್ರಾಂತ್ಯದ ಎರಡು ಪಟ್ಟಣಗಳನ್ನು ಇರಾಕ್ ಪಡೆ ಮತ್ತೆ ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುವಲ್ಲಿ ಸಫಲವಾಗಿದೆ ಎಂದು ಇರಾಕ್ ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ರಾತ್ರಿ ಐಸಿಸ್ ಉಗ್ರರ ಜತೆ ತೀವ್ರ ಸಂಘರ್ಷದ ಬಳಿಕ ಸಾದಿಯಾ ಮತ್ತು ಜುಲಾಲ ಪಟ್ಟಣಗಳನ್ನು ಸೇನೆ ವಶಪಡಿಸಿಕೊಂಡಿದೆ. ಈ ಪಟ್ಟಣಗಳ ಹೊರ ಭಾಗಗಳಲ್ಲಿ ಸಂಘರ್ಷ ಇನ್ನೂ ಮುಂದುವರಿದಿದೆ. ಸಾದಿಯಾ ಮತ್ತು ಜುಲಾಲ ಪಟ್ಟಣಗಳನ್ನು ಜೂನ್‍ನಲ್ಲಿ ಉಗ್ರರು ವಶಕ್ಕೆ ತೆಗೆದುಕೊಂಡಿದ್ದರು. ಆದರೆ ಇರಾಕ್ ಇದೀಗ ಮತ್ತೆ ತನ್ನ ಪ್ಯಾಂತ್ಯವನ್ನು ಸ್ವಾಧೀನ ಪಡೆಸಿಕೊಳ್ಳುವ ಮೂಲಕ ಯಶಸ್ವಿಯಾಗಿದೆ.

