ಮಂಗಳೂರು: ಉತ್ತರ ಕನ್ನಡ ಬರ ಪೀಡಿತ ಜಿಲ್ಲೆಗಳಿಗೆ ನೀರು ಪೂರೈಸುವ ಸಲುವಾಗಿ ಸರಕಾರ ಜಾರಿಗೊಳಿಸುತ್ತಿರುವ ನೇತ್ರಾವತಿ ತಿರುವು ಅಥವಾ ಎತ್ತಿನ ಹೊಳೆ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿ ಫೆ.22ರಂದು ಶನಿವಾರ ನಗರದ ವಿವಿಧ ಕಾಲೇಜುಗವಿದ್ಯಾಥರ್ಿಗಳು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯನ್ನು ನೇತ್ರಾವತಿ ರಕ್ಷಣಾ ಸಮಿತಿ ಹಮ್ಮಿಕೊಂಡಿತ್ತು.
ಪ್ರತಿಭಟನಾಕಾರರು ನಗರದ ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಈ ಸಂದರ್ಭ ಮಾತನಾಡಿದ ನೇತ್ರಾವತಿ ರಕ್ಷಣಾ ಸಮಿತಿ ಅಧ್ಯಕ್ಷ ಮತ್ತು ಮಾಜಿ ಶಾಸಕ ವಿಜಯ್ ಕುಮಾರ್ ಶೆಟ್ಟಿ, ಕೆಲವು ರಾಜಕಾರಣಿಗಳು ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಶತಪ್ರಯತ್ನ ನಡೆಸುತ್ತಿದ್ದಾರೆ. ಈ ಯೋಜನೆಯಿಂದ ಜಿಲ್ಲೆಯ ರೈತರು, ಮೀನುಗಾರರು ಮತ್ತು ಎಲ್ಲಾ ಜನರ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ, ಅಷ್ಟು ಮಾತ್ರವಲ್ಲದೆ ಎತ್ತಿನ ಹೊಳೆ ಯೋಜನೆಯು ಇಡೀ ಜಿಲ್ಲೆಯನ್ನು ಬರಡು ಭೂಮಿಯನ್ನಾಗಿ ಮಾಡಲಿದೆ ಎಂದು ಎಚ್ಚರಿಸಿದರು. ಈ ಯೋಜನೆಯ ಹಿಂದೆ ಬರ ಪೀಡಿತ ಪ್ರದೇಶಗಳಿಗೆ ನೀರು ಪೂರೈಸುವ ಉದ್ದೇಶವಿಲ್ಲ ಬದಲಾಗಿ ಕೆಲವು ಕಡೆಯಿರುವ ಕೈಗಾರಿಕೆಗಳಿಗೆ ನೀರು ಸರಬರಾಜು ಮಾಡುವ ಹುನ್ನಾರ ಇದರಲ್ಲಿ ಅಡಗಿದೆ ಎಂದರು. ನಂತರ ಮಾತನಾಡಿದ ಎಂ.ಜಿ ಹೆಗ್ಡೆ ನೇತ್ರಾವತಿ ತಿರುವು ಯೋಜನೆಯನ್ನು ಬೆಂಬಲಿಸಿ ಮಾತನಾಡಿದ ಯುವ ರಾಜಕಾರಣಿ ಹರ್ಷ ಮೊಯ್ಲಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು. ಹರ್ಷ ಮತ್ತು ವೀರಪ್ಪ ಮೊಯ್ಲಿ ಈ ಕುರಿತು ಒಂದು ವಾರದೊಳಗಾಗಿ ಮಾತುಕತೆಗೆ ಮುಂದಾಗಬೇಕು ಇಲ್ಲವಾದಲ್ಲಿ ಜಿಲ್ಲೆ ಬಿಟ್ಟು ತೆರಳಬೇಕು ಎಂದು ಹೆಗ್ಡೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಶಶಿರಾಜ್ ಶೆಟ್ಟಿ, ದಿನೇಶ್ ಹೊಳ್ಳಾ, ವಿದ್ಯಾಥರ್ಿ ಮುಖಂಡರಾದ ರಕ್ಷಿತ್, ರೂಪೇಶ್ ರೈ, ನೇಮಿರಾಜ್, ದಿನಕರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

