ಕೈಕಂಬ : ಗುರುಪುರ ಹಿಂದೂ ಹಿರಿಯ ಪ್ರೌಢ ಪ್ರಾಥಮಿಕ ಶಾಲೆಯಲ್ಲಿ ಸುಮಾರು ೩೩ ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ಗುರುಪುರ ನಿವಾಸಿ ಉಮಾದೇವಿ ಪುತ್ತುರಾಯ(೭೫) ಅವರು ಅಲ್ಪಕಾಲದ ಅನಾರೋಗ್ಯದಿಂದ ಜು.೧೮ರಂದು ಮಂಗಳವಾರ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರ ಪತಿ ಕೆ. ಎನ್. ಪುತ್ತುರಾಯ ಅವರು ಕೂಡ ಗುರುಪುರ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದು, ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಮೃತರು ಓರ್ವ ಪುತ್ರ ಹಾಗೂ ಓರ್ವ ಪುತ್ರಿಯ ಹಾಗೂ ಅಪಾರ ಶಿಷ್ಯವರ್ಗ ಅಗಲಿದ್ದಾರೆ.
