ಒಗಡಾಂಗೋ : ದುರಾಡಳಿತದಿಂದ ಕಂಗೆಟ್ಟುಹೋದ ಪ್ರಜೆಗಳು ಸಿಟ್ಟಾಗಿ ಸಂಸತ್ ಗೇ ಬೆಂಕಿ ಇಟ್ಟ ಅಪೂರ್ವ ಘಟನೆ ಆಫ್ರಿಕಾ ಖಂಡದ ಬರ್ಕಿನ ಫಾಸೋ ದೇಶದಲ್ಲಿ ನಡೆದಿದೆ.
ಘಟನೆಯ ವಿವರ: ಬರ್ಕಿನಾ ಫಾಸೋದ ರಾಷ್ಟ್ರಾಧ್ಯಕ್ಷ ಬ್ಲೈಸ್ ಕಾಂಪೌರ್ ಎಂಬಾತ ತನ್ನ ಪ್ರಜೆಗಳಿಗೆ ಒಂದೇ ಸಮನೆ ಕಿರುಕುಳು ಕೊಡುತ್ತಿದ್ದ . ಈತನ ವಿರುದ್ದ ಪ್ರಜೆಗಳು ಆಗಾಗ ದಂಗೆ ಏಳುತ್ತಿದ್ದರು. ಸರಕಾರಿ ವಿರೋಧಿ ಗುಂಪುಗಳು ಈತನ ಸರಕಾರವನ್ನು ಪತನಗೊಳಿಸಲು ಹವಣಿಸುತ್ತಿದ್ದರು. ಅದಕ್ಕಾಗಿ ಅವಕಾಶವೂ ಸಿಕ್ಕಿತು.
ರಾಷ್ಟ್ರಾಧ್ಯಕ್ಷ ಬ್ಲೈಸ್ ಕಾಂಪೌರ್ ರಾಷ್ಟ್ರಪತಿ ಆಳ್ವಿಕೆಯನ್ನು 27 ವರ್ಷಗಳವರೆಗೆ ವಿಸ್ತರಿಸಿದ್ದ. ಇದರಿಂದ ರೊಚ್ಚಿಗೆದ್ದ ಸರ್ಕಾರಿ ವಿರೋಧಿ ಬಣ, ರಾಷ್ಟ್ರಾಧ್ಯಕ್ಷರ ಸರ್ವಾಧಿಕಾರಿ ಧೋರಣೆಯ ವಿರುದ್ಧ ಸಿಡಿದೆದ್ದರು.. ರಾಜಧಾನಿ ಒಗಡಾಂಗೋಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಜನರ ಗುಂಪು, ಬಿಗಿ ಭದ್ರತೆಯ ನಡುವೆಯೂ ಸಂಸತ್ತಿಗೆ ನುಗ್ಗಿತು.. ಸಂಸತ್ ಒಳಗೆ ನುಗ್ಗಿದ ಜನರು ಹಿಂದೆ-ಮುಂದೆ ನೋಡದೇ, ಇಡೀ ಸಂಸತ್ತಿಗೆ ಬೆಂಕಿ ಹಚ್ಚಿದ್ರು. ಕ್ಷಣ ಮಾತ್ರದಲ್ಲಿ, ಇಡೀ ಸಂಸತ್ತು ಧಗಧಗನೆ ಹೊತ್ತಿ ಉರಿಯಲು ಆರಂಭಿಸಿತು..!
ಏಕಾಏಕಿ ಸಾವಿರಾರು ಮಂದಿ, ಸಂಸತ್ತಿಗೆ ಮುತ್ತಿಗೆ ಹಾಕಿದ ಪರಿಣಾಮ ಸಂಸತ್ತಿನ ಸುತ್ತಲು ಇದ್ದ ಭದ್ರತಾ ಸಿಬ್ಬಂದಿಗೆ ಜನರನ್ನು ತಡೆಯಲು ಸಾಧ್ಯವಾಗಿಲ್ಲ. ಹೆಚ್ಚಿನ ಭದ್ರತಾ ಸಿಬ್ಬಂದಿ ಮತ್ತು ಸೇನೆಯನ್ನು ಕರೆಸಿಕೊಳ್ಳುವಷ್ಟರಲ್ಲಿ ಸಂಸತ್ತು ಬೆಂಕಿಯಲ್ಲಿ ಬೆಂದು ಹೋಗಿತ್ತು..! ನಂತರ ಸ್ಥಳಕ್ಕೆ ಬಂದ ಸೇನೆ ಮತ್ತು ಅಗ್ನಿ ಶಾಮಕದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸ ಸಾಹಸ ಪಟ್ಟರು.. ಸಂಸತ್ ಗೆ ಬೆಂಕಿ ಇಟ್ಟ ಪ್ರಕರಣ ಇಡೀ ವಿಶ್ವದಲ್ಲೇ ಪ್ರಥಮ ಎನ್ನಲಾಗಿದೆ.

