ಶ್ರೀ ಸಾಯಿ ಫ್ರೆಂಡ್ಸ್ ಬಕರ್ೆಬೊಟ್ಟು, ಕಾಂಜಿಲಕೋಡಿ ಅಡ್ಡೂರು-ಪೊಳಲಿ ಇದರ 9ನೇ ವರ್ಷದ ವಾಷರ್ಿಕೋತ್ಸವವು ಫೆ.15 ಶನಿವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ವಹಿಸಿದ್ದರು. ಶ್ರೀಶ್ರೀಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿಗಳು ಕೇವಲ ಐದು ಜನರಿಂದ ಆರಂಭವಾದ ಈ ಸಂಘಟನೆ ಇಂದು ಬೃಹತ್ತಾಗಿ ಬೆಳೆದಿದೆ. ಇದರ ಸದಸ್ಯರು ಗ್ರಾಮೀಣ ಭಾಗಗಳಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದಾರೆ. ಮುಂದೆಯೂ ರಕ್ತದಾನ ಶಿಬಿರ ಮುಂತಾದ ಸಮಾಜಮುಖಿ ಕಾರ್ಯಗಳನ್ನು ಗ್ರಾಮೀಣ ಭಾಗಗಳಲ್ಲಿ ಹಮ್ಮಿಕೊಳ್ಳುವ ಮೂಲಕ ಸಾಯಿ ಫ್ರೆಂಡ್ಸ್ ಇತರ ಕ್ಲಬ್ಗಳಿಗೆ ಮಾದರಿಯಾಗಿ ಬೆಳೆಯಲಿ ಎಂದು ಹೇಳಿದರು. ನಂತರ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಸಾಯಿ ಫ್ರೆಂಡ್ಸ್ ಯುವಕರ ಉತ್ಸಾಹ ಮತ್ತು ಕಾರ್ಯವೈಖರಿ ಪ್ರಶಂಸನೀಯವಾಗಿದೆ. ಇಂಥಹ ನೂರಾರು ಸಂಘಟನೆಗಳು ಹುಟ್ಟಿಬೆಳೆಯಬೇಕು. ಆಗ ಸಮಾಜದ ಏಳಿಗೆ ಆಗಲು ಸಾಧ್ಯ. ಸಾಯಿ ಫ್ರೆಂಡ್ಸ್ ಇನ್ನಷ್ಟು ಉತ್ತಮ ಕಾರ್ಯಗಳನ್ನು ಮಾಡಲಿ ಎಂದು ಹೇಳಿದರು.

swami2

nalin

20vp varshikosthava-2ಮುಖ್ಯ ಅತಿಥಿಗಳಾಗಿ ರುಕ್ಮಯ ಸಪಲಿಗ ಉಳಿಯ, ಗ್ರಾ.ಪಂ.ಅಧ್ಯಕ್ಷೆ ಪದ್ಮಿನಿ ನೂಯಿ, ಪೊಳಲಿ ಮಲ್ಲಿಕಾ ಆ್ಯಗ್ರೊ ಆಯಿಲ್ಸ್ ಮಾಲಕರು ಜಯರಾಮ ಕೃಷ್ಣ, . ಯು.ಪಿ.ಇಬ್ರಾಹಿಂ, ಮಾಜಿ ಅಧ್ಯಕ್ಷರು ಗುರುಪುರ ಗ್ರಾ.ಪಂ. ನಾಗೇಶ್ ಮಾಯ, ಪ್ರಗತಿಪರ ಕೃಷಿಕರು. ರವಿಶಂಕರ್ ರಾವ್, ದೇವರಾಜ್ ಡಿ.ಬಾಳ, ಉಪಸ್ಥಿತರಿದ್ದರು. ವಾದಿರಾಜ ಕಲ್ಲೂರಾಯ ಕಿನ್ನಿಕಂಬಳ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಮತ್ತು ರಾತ್ರಿ ಗಂಟೆ 9ಕ್ಕೆ ಅರುಣ್ಚಂದ್ರ ಬಿ.ಸಿ.ರೋಡ್ ಇವರ ರಚನೆ ಹಾಗೂ ನಿದರ್ೇಶನದಲ್ಲಿ ರಾಜಶ್ರೀ ಮೋಕೆದ ಕಲಾವಿದರಿಂದ ‘ಎನ್ನ ಪುಣ್ಯ’ ತುಳು ಹಾಸ್ಯಮಯ ನಾಟಕ ನಡೆಯಿತು.

By suddi9

Leave a Reply

Your email address will not be published. Required fields are marked *