ಮೂಡುಬಿದರೆ: ಸ್ನೇಹಜೀವಿಯಾಗಿ ಸಮಾಜಸೇವೆ ಮಾಡುವುದು ರೋಟರಿ ಕ್ಲಬ್ನ ವಿಶೇಷತೆ. ಸೇವೆ, ಒಡನಾಟ, ಸಮಾನತೆ ಕ್ಲಬ್ನ ಜೀವಾಳ. ನಾಯಕತ್ವಕ್ಕೆ ಹೇರಳವಾದ ಅವಕಾಶ ರೋಟರಿ ಕ್ಲಬ್ನಲ್ಲಿರುತ್ತದೆ ಎಂದು ರೋಟರಿ ಜಿಲ್ಲೆ 3180 ಚುನಾಯಿತ ಗವರ್ನರ್ ಡಾ. ಭಾಸ್ಕರ್ ಎಸ್ ಹೇಳಿದರು.

ಬಜ್ಪೆ ರೋಟರಿ ಕ್ಲಬ್ ಆಶ್ರಯದಲ್ಲಿ ಮೂಡುಬಿದರೆಯ ಪಂಚರತ್ನ ಸಭಾಂಗಣದಲ್ಲಿ ಮಂಗಳವಾರ ಸಂಜೆ ಪಡುಮಾನರ್ಾಡು ಮೂಡುಬಿದರೆ ರೋಟರಿ ಕ್ಲಬ್ನ್ನು ಉದ್ಘಾಟಿಸಿ ಮಾತನಾಡಿದರು. ಶಾಂತಿ ಪದವೀದರರನ್ನು ತಯಾರು ಮಾಡಲು ಜಗತ್ತಿನ ಹಲವೆಡೆ ಸಂಸ್ಥೆಯು ಕೇಂದ್ರಗಳನ್ನು ಸ್ಥಾಪಿಸಿದೆ. ನ್ಯಾಯಯುತ ನಿಧರ್ಾರ, ಎಲ್ಲರ ಅಭಿವೃದ್ಧಿ ರೋಟರಿ ಕ್ಲಬ್ನಲ್ಲಿರುತ್ತದೆ. ಯುವಜನರು ರೋಟರಿ ಕ್ಲಬ್ಗೆ ಸೇರಿದರೆ ಸಂಸ್ಥೆಯ ಜೀವಕಳೆ ಹೆಚ್ಚಾಗುತ್ತದೆ. ಪಲ್ಸ್ ಪೊಲಿಯೋ ಜಾಗೃತಿಯಲ್ಲಿ ರೋಟರಿ ಸೇವೆ ಅಪಾರ ಎಂದರು.
ಪಡುಮಾನರ್ಾಡು ಮೂಡುಬಿದರೆ ರೋಟರಿ ಅಧ್ಯಕ್ಷ ಮಹಮ್ಮದ್ ಅಸ್ಲಾಂ ಮಾತನಾಡುತ್ತಾ, ರೋಟರಿ ಧ್ಯೇಯದೊಂದಿಗೆ ಸರ್ವರ ಏಳಿಗೆಗಾಗಿ ಪಡುಮಾನರ್ಾಡು ರೋಟರಿ ಕ್ಲಬ್ ದುಡಿಯಲಿದೆ. ಸಮಾನ ಅವಕಾಶಕ್ಕೆ ಅಧ್ಯತೆ ನೀಡಿ ಜನಸಾಮಾನ್ಯರ ರೋಟರಿ ಕ್ಲಬ್ ಆಗಿ ಮೂಡಿಬರಲಿದೆ ಎಂದರು.
ರೋಟರಿ ಜಿಲ್ಲೆ 3180 ನಾಮ ನಿದರ್ೇಶಿತ ಗವರ್ನರ್ ಡಾ.ಭರತೇಶ್, ವಲಯ 3ರ ಸಹಾಯಕ ಗವರ್ನರ್ ಮಾಧವ ಸುವರ್ಣ, ಗವರ್ನರ್ ವಿಶೇಷ ಪ್ರತಿನಿಧಿ ರಾಬಟರ್್ ಫ್ರಾಂಕ್ಲಿನ್ ರೆಗೋ, ವಲಯ ಲೆಫ್ಟಿನೆಂ ನಾರಾಯಣ ಪಿ.ಶೆಟ್ಟಿ ಉಪಸ್ಥಿತರಿದ್ದರು.
ಬಜ್ಪೆ ರೋಟರಿ ಕ್ಲಬ್ ಅಧ್ಯಕ್ಷ ಮಾದವ ಅಮೀನ್ ಸ್ವಾಗತಿಸಿದರು. ಅಶೋಕ್ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಧೀರಜ್ ನೂತನ ಪದಾಧಿಕಾರಿಗಳ ಪರಿಚಯ ಮಾಡಿದರು. ಬಜ್ಪೆ ಕ್ಲಬ್ ಕಾರ್ಯದಶರ್ಿ ಲೆನ್ನಿ ಫೆನರ್ಾಂಡಿಸ್ ವಂದಿಸಿದರು.
ನೂತನ ಪದಾಧಿಕಾರಿಗಳು: ಮಹಮ್ಮದ್ ಅಸ್ಲಾಂ(ಅಧ್ಯಕ್ಷ), ಪ್ರವೀಣ್ ಜೈನ್(ಕಾರ್ಯದಶರ್ಿ), ಪ್ರತಾಪ್ ಕುಮಾರ್ (ಉಪಾಧ್ಯಕ್ಷ) , ರಾಕೇಶ್ ಭಟ್( ಜತೆ ಕಾರ್ಯದಶರ್ಿ), ಮಹೇಶ್ ಕುಮಾರ್( ಕೋಶಾಧಿಕಾರಿ), ಜಯಸೂರ್ಯ( ದಂಡಪಾಣಿ), ಕೆ.ಧೀರಜ್ ಕುಮಾರ್ ( ಕ್ಲಬ್ ಸೇವಾ ನಿದರ್ೇಶಕ), ದಿನೇಶ್ ಆನಡ್ಕ( ವಕೇಶನಲ್ ಸೇವಾ ನಿದರ್ೇಶಕ), ವಿಶ್ವಾಸ್ ಕುಮಾರ್( ಸಮುದಯ ಸೇವಾ ನಿದರ್ೇಶಕ),ಜೆರ್ರಿ ಡಿ’ಕೋಸ್ತಾ ( ಅಂತಾರಾಷ್ಟ್ರೀಯ ಸೇವಾ ನಿದರ್ೇಶಕ), ಸುನೀಲ್ ಕುಮಾರ್(ಯುವ ಪೀಳಿಗೆ ನಿದರ್ೇಶಕ), ಶಶಿಧರ ನಾಯಕ್ ( ಪಲ್ಸ್ ಪೊಲಿಯೋ ಕಾರ್ಯಕ್ರಮ ನಿದರ್ೇಶಕ), ಪ್ರದೀಪ್ಚಂದ್ರ ಎಂ( ರೋಟರಿ ಪೌಂಡೇಷನ್ ನಿದರ್ೇಶಕ) ಸಹಿತ ಒಟ್ಟು 47 ಮಂದಿ ಸದಸ್ಯರು ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದರು.
