ಬೆಂಗಳೂರು: ‘ಸಿಂಪಲ್ಲಾಗೊಂದು ಲವ್ ಸ್ಟೋರಿ’ ಸಿನಿಮಾದ ಮೂಲಕ ಪ್ರೇಕ್ಷಕರ ಮೇಲೆ ಅದ್ಭುತ ಪ್ರಭಾವ ಬೀರಿದ ರಕ್ಷಿತ್ ಶೆಟ್ಟಿ ನಿದರ್ೇಶನದಲ್ಲಿ ಮೂಡಿಬರುತ್ತಿರುವ ಉಳಿದವರು ಕಂಡಂತೆ ಸಿನಿಮಾದ ಬಗ್ಗೆ ಈಗಾಗಲೇ ಸಿನಿರಸಿಕರಲ್ಲಿ ಕುತೂಹಲ ಮನೆ ಮಾಡಿದೆ. ಇದರ ಬೆನ್ನಿಗೇ ರಕ್ಷಿತ್ ‘ರಿಕ್ಕಿ’ ಎಂಬ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದು ಮಿಲನ ಚಿತ್ರದ ನಾಯಕಿ ಪಾರ್ವತಿ ಮೆನನ್ ರಕ್ಷಿತ್ಗೆ ಜೋಡಿಯಾಗುವ ಸಾಧ್ಯತೆಯಿದೆ.
ಸಿಂಪಲ್ಲಾಗ್ ಚಿತ್ರ ತಂಡದ ಸದಸ್ಯನಾಗಿರುವ ವೃಷಭ್ ಶೆಟ್ಟಿ ರಿಕ್ಕಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ತಮ್ಮ ಸಿನಿಮಾಗಳಿಗೆ ಅಬ್ಬರದ ಪ್ರಚಾರ ನೀಡದ ರಕ್ಷಿತ್ ಮತ್ತು ತಂಡ ಯಾವುದೇ ಗಿಮಿಕ್ಗಳನ್ನು ಮಾಡದೆ ಸಿನಿಮಾ ಹಿಟ್ ಮಾಡುವ ಸಾಮಥ್ರ್ಯ ಹೊಂದಿದೆ. ಅದೀಗಾಗಲೇ ಸಿಂಪಲ್ಲಾಗ್ ಚಿತ್ರದಿಂದ ದೃಢವಾಗಿದೆ. ಉಳಿದವರು ಕಂಡಂತೆ ಚಿತ್ರದ ಹಾಡುಗಳು ಮತ್ತು ಟ್ರೈಲರ್ನ್ನು ನೋಡಿರುವ ಸಿನಿಪ್ರಿಯರು ಚಿತ್ರ ಬಿಡುಗಡೆಗಾಗಿ ಕಾದು ಕುಳಿತಿದ್ದಾರೆ. ಅಲ್ಲಿಗೆ ಭಟ್ ಕ್ಯಾಂಪ್ ನಂತರ ಸ್ಯಾಂಡಲ್ವುಡ್ನಲ್ಲಿ ತಮ್ಮದೇ ಅಭಿಮಾನಿ ಬಳಗವನ್ನು ಬೆಳೆಸಿಕೊಂಡ ಮತ್ತೊಂದು ಚಿತ್ರ ತಂಡದ ಉಗಮವಾಗಿದೆ
