ಕಟೀಲು: ಆನ್ಲೈನ್ ಶಿಕ್ಷಣ ನೀಡಿ ವಿದ್ಯಾರ್ಥಿಗಳಿಗೆ ಒಫ್ ಲೈನ್ ಪರೀಕ್ಷೆ ಬರಿಸುವುದು ಯಾವ ನ್ಯಾಯ? ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟ ಆಡುತ್ತಿರುವ ರಾಜ್ಯ ಸರಕಾರದ ನಡೆ ಖಂಡನಿಯ ಎಂದು ರಾಷ್ಟ್ರೀಯ ಸಂಯೋಜಕರು ಆರ್ ಟಿ ಐ ಸೆಲ್ ಎನ್ ಎಸ್ ಯು ಐ ಅನ್ವಿತ್ ಕಟೀಲ್ ಖಂಡಿಸಿದ್ದಾರೆ.
ವಿಟಿಯು ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ಲಾಸ್ ನಡೆಸಿ ಒಡ್ ಸೆಮಿಸ್ಟರ್ ಪರೀಕ್ಷೆಗಳನ್ನು ಒಫ್ ಲೈನ್ ನಲ್ಲಿ ನಡೆಸಿದ್ದರು ಇದರಿಂದ ತುಂಬಾ ವಿದ್ಯಾರ್ಥಿಗಳು ಅನ್ನುತಿರ್ಣರಾಗಿದ್ದಾರೆ.ಇಂಜಿನಿಯರಿಂಗ್ ನಲ್ಲಿ ಒಂದು ವರ್ಷದಲ್ಲಿ 4 ಕಿಂತ ಹೆಚ್ಚು ಸಬ್ಜೆಕ್ಟ್ ಫೈಲ್ ಆದಲ್ಲಿ ವಿದ್ಯಾರ್ಥಿಗಳು ಇಯರ್ ಔಟ್ ಅನ್ನುವ ಒಂದು ಪದ್ಧತಿ ಇದೆ. ಆ ವಿದ್ಯಾರ್ಥಿ ಮುಂದಿನ ತರಗತಿಗೆ ಉತ್ತಿರ್ಣ ಆಗುವುದಿಲ್ಲ.
ಒಂದು ವರ್ಷ ಮನೆಯಲ್ಲೇ ಇದ್ದು ಬಾಕಿ ಉಳಿದ ಸಬ್ಜೆಕ್ಟ್ ಗಳನ್ನ ಕ್ಲಿಯರ್ ಮಾಡಿ ಇನ್ನೊಮ್ಮೆ ಅಡ್ಮಿಷನ್ ಪಡೆಯಬೇಕು. ಆನ್ಲೈನ್ ತರಗತಿಯಿಂದ ಒಡ್ ಸೆಮಿಸ್ಟರ್ ಪರೀಕ್ಷೆಯಲ್ಲೇ ತುಂಬ ವಿದ್ಯಾರ್ಥಿಗಳು ಫೈಲ್ ಆಗಿದ್ದರೆ.
ಆನ್ಲೈನ್ ಶಿಕ್ಷಣ ಗ್ರಾಮಾಂತರ ವಿದ್ಯಾರ್ಥಿಗಳಿಗೆ ತಲುಪುತ್ತಿಲ್ಲ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶಿಕ್ಷಣ ವಂಚನೆ ಆಗುತ್ತಿದೆ. ಆದುದರಿಂದ ವಿದ್ಯಾರ್ಥಿಗಳಿಗೆ ಈ ವರ್ಷ ಕೋವಿಡ್ ಸಂದರ್ಭದಲ್ಲಿ ಇಯರ್ ಬ್ಯಾಕ್ ಸ್ಕೀಮ್ ನ ಯೂನಿವರ್ಸಿಟಿ ರದ್ದು ಮಾಡಬೇಕು.ರದ್ದೂಮಾಡಿದಲ್ಲಿ ಅದೆಷ್ಟು ವಿದ್ಯಾರ್ಥಿಗಳಿಗೆ ಮುಂದಿನ ವರ್ಷಕ್ಕೆ ತೇರ್ಗಡೆಯಾಗಳು ಅವಕಾಶ ಒದಗುತ್ತದೆ. ಹಾಗೂ ಕೆಲವು ವಿಶ್ವವಿದ್ಯಾಲಯಗಳು ಇನ್ನು ಒಡ್ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಿಲ್ಲ.
ಮುಂದಿನ ಸೆಮಿಸ್ಟರ್ ತರಗತಿಗಳನ್ನು ಆನ್ಲೈನ್ ಮೂಲಕ ಪ್ರಾರಂಭ ಮಾಡಿದ್ದಾರೆ.ವಿದ್ಯಾರ್ಥಿಗಳು ಎರಡು ಸೆಮಿಸ್ಟರ್ ಪರಿಕ್ಷಗಳನ್ನ ಓದುವುದು ಹೇಗೆ ಆದಷ್ಟು ಬೇಗ ಇದರ ಬಗ್ಗೆ ಉನ್ನತ ಶಿಕ್ಷಣ ಸಚಿವರು ಒಂದು ಸ್ಪಷ್ಟ ಮಾಹಿತಿಯನ್ನು ನೀಡಬೇಕು ಎಂದು ಅಗ್ರಹಿಸುತ್ತೇನೆ.
