ಬಜಪೆ: ಎಕ್ಕಾರು ದುರ್ಗಾ ಕಲ್ಚರಲ್ &ಕ್ರಿಕೆಟ್ ಕ್ಲಬ್ ನ ವಾರ್ಷಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯು ಎಕ್ಕಾರು ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ನಡೆಯಿತು ಕ್ಲಬ್ ನ ಅಧ್ಯಕ್ಷರಾಗಿ ದೀಪಕ್ ಪೂಜಾರಿ ಎಕ್ಕಾರು,ಉಪಾಧ್ಯಕ್ಷರಾಗಿ ಸೂರಜ್ ಸುವರ್ಣ ಎಕ್ಕಾರು ಆಯ್ಕೆಯಾದರು.
ಕಾರ್ಯದರ್ಶಿಯಾಗಿ ಶಿವಪ್ರಸಾದ್ ಶೆಟ್ಟಿ ಎಕ್ಕಾರು,ಕೋಶಾಧಿಕಾರಿಯಾಗಿ ನಿತೇಶ್ ಶೆಟ್ಟಿ ಎಕ್ಕಾರು,ಜತೆ ಕೋಶಾಧಿಕಾರಿಯಾಗಿ ಸತೀಶ್ ಆಚಾರ್ಯ,ಜತೆ ಕಾರ್ಯದರ್ಶಿಯಾಗಿ ಸುಮನ್ ಕುಂದರ್ ಎಕ್ಕಾರು,ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಶೇಖರ್ ಶೆಟ್ಟಿ ,ಸಂದೀಪ್ ಸಾಲ್ಯಾನ್ ಎಕ್ಕಾರು,ಕ್ರೀಡಾ ನಾಯಕನಾಗಿ ರಕ್ಷಣ್ ಶೆಟ್ಟಿ ಎಕ್ಕಾರು,ಉಪನಾಯಕನಾಗಿ ಅಶೋಕ್ ಶೆಟ್ಟಿ ಎಕ್ಕಾರು,ಕ್ರೀಡಾ ಕಾರ್ಯದರ್ಶಿಯಾಗಿ ಬಾಲಕೃಷ್ಣ ಪೂಜಾರಿ ಯವರುಗಳು ಆಯ್ಕೆಯಾದರು.ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜೇತರಾದ ಹಾಗೂ ಗ್ರಾಮ ಪಂಚಾಯತ್ ನ ಸದಸ್ಯರಾಗಿ ಆಯ್ಕೆಯಾದ ಸುದೀಪ್ ಅರ್.ಅಮೀನ್ ಹಾಗೂ ಪ್ರವೀಣ್ ಆಚಾರ್ಯ ಎಕ್ಕಾರು ಅವರನ್ನು ಗೌರವಿಸಲಾಯಿತು.
