ಕೈಕಂಬ : ಗುರುಪುರ ಬೆಳ್ಳೂರುಗುತ್ತು ಶ್ರೀ ಕರ‍್ದಬ್ಬು ಮತ್ತು ತನ್ನಿಮಾನಿಗ, ರಾಹು, ಗುಳಿಗ, ಪಂಜುರ್ಲಿ ದೈವಗಳ ಕಾಲಾವಧಿ ಕೋಲ ಎ. ೧೭ ಮತ್ತು ೧೮ರಂದು ನಡೆಯಲಿದೆ.
ಬೆಳ್ಳೂರುಗುತ್ತು ಗರೋಡಿ ಮನೆಯ ದಿ. ಸುಂದರಿ ಶೆಟ್ಟಿ ಸ್ಮರಣಾರ್ಥ ಮಕ್ಕಳು ಮತ್ತು ಮೊಮ್ಮಕ್ಕಳ ವತಿಯಿಂದ ಎ. ೧೭ರಂದು ರಾತ್ರಿ ೮:೩೦ಕ್ಕೆಅನ್ನದಾನ ಸೇವೆ ನಡೆಯಲಿದೆ. ರಾತ್ರಿ ೯ಕ್ಕೆ ಶ್ರೀ ಕೋರ‍್ದಬ್ಬು ಮತ್ತು ತನ್ನಿಮಾನಿಗ ದೈವಗಳ ಹಾಗೂ ಎ. ೧೮ರಂದು ರಾತ್ರಿ ರಾಹು, ಗುಳಿಗ ಮತ್ತು ಪಂಜುರ್ಲಿ ದೈವಗಳ ಕೋಲ ನಡೆಯಲಿದೆ. ಕೋಲದ ಬಳಿಕ ಬಳಿಕ ರಾತ್ರಿ ಮಾರಿ ಓಡಿಸುವ ಕಾರ್ಯಕ್ರಮವಿದೆ.
