ಕ್ರೀಡೆಯಿಂದ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ : ಸಿಲ್ವಿಯಾ ಕ್ಯಾಸ್ಟಲಿನೊ

ಗುರುಪುರ : ಕೈಕಂಬ ಕಿನ್ನಿಕಂಬಳದ ರೋಸಾ ಮಿಸ್ತಿಕಾ ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟ-ಕ್ರೀಡಾ ಸಂಭ್ರಮ(೨೦೨೬) ನ. ೨೬ರಂದು ವಿದ್ಯಾರ್ಥಿಗಳ ಪಥಸಂಚಲನ, ಕ್ರೀಡಾಜ್ಯೋತಿ ಬೆಳಗಿಸುವಿಕೆ, ಪಾರಿವಾಳಗಳ ಹಾರಿ ಬಿಡುವಿಕೆ, ಗುಂಡೆಸೆತದ(ಶಾಟ್‌ಪುಟ್) ಮೂಲಕ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು.

ಉದ್ಘಾಟನಾ ಸಮಾರಂಭದಲ್ಲಿ ಪುತ್ತೂರಿನ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸಿಲ್ವಿಯಾ ರೂತ್ ಕ್ಯಾಸ್ಟಲಿನೊ ಅವರು ಮಾತನಾಡಿ, ಪರೀಕ್ಷೆ ದೃಷ್ಟಿಯಿಂದ ಪಠ್ಯ ಚಟುವಟಿಕೆ ಮಹತ್ವದ್ದಾದರೂ, ಕ್ರೀಡೆಯಿಂದ ವಿದ್ಯಾರ್ಥಿಗಳ ನೈಜ ವ್ಯಕ್ತಿತ್ವ ಅನಾವರಣಗೊಳ್ಳುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಸೋತವರು ಕುಗ್ಗದೆ ಮುನ್ನಡೆಯಬೇಕು. ಅದಕ್ಕಾಗಿ ಛಲ ನಿಮ್ಮದಾಗಬೇಕು ಎಂದರು.

ರೋಸಾ ಮಿಸ್ತಿಕಾ ಸಮೂಹ ಸಂಸ್ಥೆಗಳ ಸಂಚಾಲಕಿ ಸಿಸ್ಟರ್ ರೋಸ್ ಲಿಟಾ ಬಿಎಸ್ ಅವರು ಮಾತನಾಡಿ, ಕತ್ತಲು ಕಳೆದು ಬೆಳಕು ಚೆಲ್ಲಿದ ಇಂದಿನ ಈ ಕ್ರೀಡಾಕೂಟದ `ಕ್ರೀಡಾಜ್ಯೋತಿ’ಯಂತೆ ಎಲ್ಲರ ಬದುಕಲ್ಲಿ ಬೆಳಕು ಆವರಿಸಲಿ. ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ. ಸೋಲು-ಗೆಲುವು ಇದ್ದೇ ಇರುತ್ತದೆ. ಒಂದು ಸೋಲು ಹಲವು ಗೆಲುವಿನ ಬಾಗಿಲು ತೆರೆಯಬಹುದು ಎಂದರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಬೆಥನಿ ವಿದ್ಯಾ ಸಂಸ್ಥೆ ಮಂಗಳೂರು ಪ್ರಾಂತ್ಯದ ಉಪ-ಕಾರ್ಯದರ್ಶಿ ಸಿಸ್ಟರ್ ಸಿಸಿಲಿಯಾ ಮೆಂಡೋನ್ಸ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಪರಿಶ್ರಮದ ಗುಣ ಬೆಳೆಸಲು ಅವಕಾಶ ಕ್ರೀಡೆಯಲ್ಲಿದೆ. ತರಗತಿಗಿಂತ ಭಿನ್ನ ಶಿಕ್ಷಣ ಕ್ರೀಡೆಯಲ್ಲಿದೆ. ಇದು ಜೀವನಕ್ಕೆ ಮುಖ್ಯ. ಈ ಮೂಲಕ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳ್ಳುತ್ತದೆ. ಪರಸ್ಪರ ಗೌರವಿಸುವ ಗುಣ ಕ್ರೀಡೆ ಕಲಿಸುತ್ತದೆ ಎಂದರು.

ಮೊದಲಿಗೆ ಶಾಲಾ ಬ್ಯಾಂಡ್‌ನೊAದಿಗೆ ನೀಲಿ, ಹಸಿರು, ಕೆಂಪು ಮತ್ತು ಹಳದಿ ಬಣ್ಣದ ಸಮಸವಸ್ತç ಧರಿಸಿದ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ, ಧ್ವಜವಂದನೆ, ಕ್ರೀಡಾ ಧ್ವಜಾರೋಹಣ, ಕ್ರೀಡಾಜ್ಯೋತಿ ಬೆಳಗಿಸಲಾಯಿತು.

ಸಮಾರಂಭದಲ್ಲಿ ರೋಸಾ ಮಿಸ್ತಿಕಾ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ಲೀನಾ ಪಿರೇರ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ನವೀನ್ ಸಪಲಿಗ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಲ. ಜೆಫ್ರಿಯನ್ ತೌರೊ, ಸಂಘದ ಕೋಶಾಧಿಕಾರಿ ಮೆಲ್ವಿನ್ ಸಲ್ಡಾನ ಗುರುಪುರ, ತಾಪಂ ಮಾಜಿ ಸದಸ್ಯ ಸುನಿಲ್ ಜಿ, ವೆಲೆರಿಯನ್ ಸಿಕ್ವೇರ, ಸಮೂಹ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು, ಶಿಕ್ಷಕೇತರ ವರ್ಗ, ಹಳೆ ವಿದ್ಯಾರ್ಥಿಗಳು, ವಿದ್ಯಾರ್ಥಿ ಪೋಷಕರು, ವಿದ್ಯಾರ್ಥಿಗಳು ಇದ್ದರು. ರೋಸಾ ಮಿಸ್ತಿಕಾ ಪ್ರೌಢಶಾಲಾ ಮುಖ್ಯಶಿಕ್ಷಕಿ ಸಿಸ್ಟರ್ ಮರಿಸ್ಸಾ ಲೂಸಿ ಸ್ವಾಗತಿಸಿ, ಪ್ರಸ್ತಾವಿಸಿದರು. ಶಿಕ್ಷಕಿಯರಾದ ಸಬಿನಾ ಕ್ರಾಸ್ತ ಮತ್ತು ಐಡಾ ಪಿರೇರ ನಿರೂಪಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಲ್ಯಾನ್ಸಿ ಸಿಕ್ವೇರ ವಂದಿಸಿದರು. ಅತಿಥಿಗಳು ಶಾಟ್‌ಪುಟ್ ಎಸೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

By Suddi9