ಕೈಕಂಬ : ಗುರುಪುರ ಕೊಳದಬದಿ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಬಡಕರೆಗುತ್ತು ಜಯರಾಮ ಶೆಟ್ಟಿ ಅವಿರೋಧ ಆಯ್ಕೆಯಾಗಿದ್ದಾರೆ. ಸಮಿತಿ ಸದಸ್ಯರಾಗಿ ಜಿ ಕೆ ಕೃಷ್ಣ ಭಟ್, ಹರೀಶ್ ಶೆಟ್ಟಿ ಬೆಳ್ಳಿಬೆಟ್ಟುಗುತ್ತು, ರೋಹಿತಾಶ್ವ ಭಂಡಾರಿ ಮರಂಕರಿಯಗುತ್ತು, ಗೀತಾ ವಿ ಭಟ್, ಪದ್ಮಾವತಿ, ರಾಮ ಮುಖಾರಿ ಹಾಗೂ ಉಮೇಶ್ ಮುಂಡ ಕಾರ್ಯ ನಿರ್ವಹಿಸಲಿದ್ದಾರೆ.
