ಕೈಕಂಬ : ಗುರುಪುರ ಮಠದಬೈಲು ಶ್ರೀ ಕಟೀಲು ಯಕ್ಷಗಾನ ಸಮಿತಿ ಇದರ ವತಿಯಿಂದ ಎಪ್ರಿಲ್ ೪ರಂದು ಮಠದಬೈಲು ಬಾಕಿಮಾರು ಗದ್ದೆಯಲ್ಲಿ ಶ್ರೀ ಕ್ಷೇತ್ರ ಕಟೀಲು ಮೇಳದವರಿಂದ ಪ್ರದರ್ಶನಗೊಳ್ಳಲಿರುವ ಹತ್ತು ಸಮಸ್ತರ `ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನದಂಗವಾಗಿ ಭಾನುವಾರ ಜಲ್ಲಿಗುಡ್ಡೆ ಜೆ ಸಿ ಫ್ರೆಂಡ್ಸ್ ಕ್ಲಬ್ ಕಚೇರಿಯಲ್ಲಿ ವಿಶೇಷ ಸಭೆ ನಡೆಯಿತು.ಗುರುಪುರ ಮಠದಬೈಲಿನಲ್ಲಿ ಹಿಂದೆ ೨೩ ನಡೆದಿದ್ದ ಈ ಯಕ್ಷಗಾನ ಕಾರಣಾತರಗಳಿಂದ ೨೧ ವರ್ಷ ಸ್ಥಗಿತಗೊಂಡಿದ್ದು, ಕಟೀಲು ಮೇಳದ ಈ ಯಕ್ಷಗಾನಕ್ಕೆ ಈ ವರ್ಷ ಮರು ಚಾಲನೆ ನೀಡಲಾಗಿದೆ.gur-mar-28-yakshagana-1

ಸಮಿತಿ ಅಧ್ಯಕ್ಷ, ಗುರುಪುರ ಗ್ರಾಪಂ ಸದಸ್ಯ ಸಚಿನ್ ಅಡಪ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಕೆಲವು ಉಸ್ತುವಾರಿ ಸಮಿತಿ ರಚಿಸಲಾಗಿ, ಮಹತ್ವದ ಸೂಚನೆ ನೀಡಲಾಯಿತು. ರಾಕೇಶ್ ಪೂಜಾರಿ(ಅಧ್ಯಕ್ಷ, ಜೆ ಸಿ ಫ್ರೆಂಡ್ಸ್ ಕ್ಲಬ್, ಜಲ್ಲಿಗುಡ್ಡೆ) ಹೇಮಚಂದ್ರ(ಕಾರ್ಯದರ್ಶಿ, ಶ್ರೀ ಶಬರಿ ಸೇವಾ ಸಮಿತಿ, ಕಲ್ಲಕಲಂಬಿ ಗುಡ್ಡೆ), ಸುನಿಲ್ ಕುಮಾರ್(ಗುರುಪುರ ಗ್ರಾಪಂ ಸದಸ್ಯ), ಜಿ ಎಂ ಉದಯ ಭಟ್(ಗುರುಪುರ ಗ್ರಾಪಂ ಹಾಲಿ ಸದಸ್ಯ, ಮಾಜಿ ಉಪಾಧ್ಯಕ್ಷ), ಶಿವಶಂಕರ್(ಅಧ್ಯಕ್ಷ, ಯುವಕ ಸಂಘ(ರಿ) ಗುರುಪುರ), ವರದರಾಜ್ ಶೆಟ್ಟಿ, ಉಪ್ಪುಗೂಡು ಹಾಗೂ ಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದ ಸಮಿತಿ ಖಜಾಂಚಿ ಗಣೇಶ್ ಕೊಟ್ಟಾರಿ ವಂದಿಸಿದರು.gur-mar-28-yakshagana-2

gur-mar-28-yakshagana-3

By Suddi9

Leave a Reply

Your email address will not be published. Required fields are marked *