ಕೈಕಂಬ: ಗುರುಪುರ ಗ್ರಾಮ ಪಂಚಾಯತ್ನ ಮೂಳೂರು ಗ್ರಾಮ ವ್ಯಾಪ್ತಿಯ ಮಠದಗುಡ್ಡೆ ಬಳಿ ಪರಿಶಿಷ್ಟ ಜಾತಿ(ಎಸ್ಸಿ) ಕಾಲೊನಿಯಲ್ಲಿ ಲೋಕೋಪಯೋಗಿ ಇಲಾಖೆಯ ೬ ಲಕ್ಷ ರೂ ಅನುದಾನದ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಬುಧವಾರ ಭೂಮಿಪೂಜೆ ನಡೆಸಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಪಂಚಾಯತ್ ಸದಸ್ಯರಾದ ರಾಜೇಶ್ ಸುವರ್ಣ, ಹರೀಶ್ ಬಳ್ಳಿ, ಸುನಿಲ್ ಕುಮಾರ್, ಮಾಜಿ ಸದಸ್ಯರಾದ ಸೇಸಮ್ಮ, ಶೋಭಾ ಡಿ, ಸಾದಿಕ್ ಹಾಗೂ ಬಿಜೆಪಿ ಪ್ರಮುಖರಾದ ಸೋಮಯ್ಯ, ಪುರಂದರ ಮಲ್ಲಿ, ವಿನಯ ಸುವರ್ಣ, ಶ್ರೀಮತಿ, ಕಾರ್ಯಕರ್ತರು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.
