
ದೆಹಲಿ: ಅಮೆಥಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸೆಣಸಲಿರುವ ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ್ ತನ್ನ ಚುನಾವಣಾ ಪ್ರಚಾರವನ್ನು ಉತ್ತರ ಪ್ರದೇಶದಿಂದ ಆರಂಭಿಸಿದ್ದು, ಈ ವೇಳೆ ಕಾಂಗ್ರೆಸ್ನ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ಮೂತರ್ಿಯ ಕಾಲಿಗೆ ಬಿದ್ದು ಆಶೀವರ್ಾದ ಪಡೆಯುವ ಮೂಲಕ ಆರಂಭಿಸಿದ್ದಾರೆ.
ಈ ವೇಳೆ ಮಹಾತ್ಮಾ ಗಾಂಧಿ ಮತ್ತು ಅಂಬೇಡ್ಕರ್ ಅವರ ಮೂತರ್ಿಗಳಿಗೂ ವಿಶ್ವಾಸ್ ನಮಸ್ಕರಿಸಿದರು. ಅಮೆಥಿಯ ಜನರು ರಾಹುಲ್ ಗಾಂಧಿಯನ್ನು ಎರಡು ಬಾರಿ ಗೆಲ್ಲಿಸಿದ್ದಾರೆ ಆದರೆ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಯಾವ ಕಾರ್ಯಗಳನ್ನೂ ಹಮ್ಮಿಕೊಳ್ಳಲಿಲ್ಲ. ರಾಹುಲ್ ಭರವಸೆ ನೀಡಿದ ವಿದ್ಯುತ್, ನೀರು, ಶಿಕ್ಷಣ, ಅಭಿವೃದ್ಧಿ ಮುಂತಾದ ಕ್ಷೇತ್ರಗಳು ಯಾವ ಅಭಿವೃದ್ಧಿಯನ್ನೂ ಕಂಡಿಲ್ಲ ಎಂದು ವಿಶ್ವಾಸ್ ಟೀಕಿಸಿದ್ದಾರೆ. ಮತದಾರರು ರಾಹುಲ್ ತಾಯಿ ಸೋನಿಯಾ ಗಾಂಧಿ, ತಂದೆ ರಾಜೀವ್ ಗಾಂಧಿ ಮತ್ತು ದೊಡ್ಡಪ್ಪ ಸಂಜಯ್ ಗಾಂಧಿಯನ್ನೂ ಆರಿಸಿದ್ದಾರೆ. ಗಾಂಧಿ ಪರಿವಾರವು ಅಮೆಥಿಯನ್ನು ತಮ್ಮ ವಂಶಪಾರಂಪರ್ಯ ಕ್ಷೇತ್ರದಂತೆ ನಡೆಸಿಕೊಳ್ಳುತ್ತಿದ್ದು, ನಿಧಾನವಾಗಿ ಜನರು ಕಾಂಗ್ರೆಸ್ನಿಂದ ಯಾವ ಅಭಿವೃದ್ಧಿಯೂ ಸಾಧ್ಯವಿಲ್ಲ ಎಂಬುದನ್ನು ಅರಿತಿದ್ದಾರೆ ಎಂದು ವಿಶ್ವಾಸ್ ಹೇಳಿದರು
