bull
ಪಂಜಾಬ್: ಒಂದು ಕೋಣದ ಬೆಲೆಯೆಷ್ಟಿರಬಹುದು ಅಬ್ಬಬ್ಬಾ ಎಂದರೆ ಲಕ್ಷಗಳಲ್ಲಿ ಇರಬಹುದು. ಆದರೆ ಪಂಜಾಬ್ನ ಕೃಷಿ ಮೇಳದಲ್ಲಿ ಪ್ರದರ್ಶನಗೊಂಡ ಈ ಕೋಣದ ಬೆಲೆ ಬರೋಬ್ಬರಿ ಹತ್ತು ಕೋಟಿ ರೂ,. ಐದೂವರೆ ವರ್ಷದ ಈ ಕೋಣದ ಮಾಲೀಕ ಸಂತೋಕ್ ಸೋಮಲ್ ಅದಕ್ಕೆ ದಿನಾಲೂ ಹತ್ತು ಲೀ. ಹಾಲು, ಮೂರು ಕೆಜಿ ಮೊಸರು ಮತ್ತು ಹತ್ತು ಕೆಜಿ ಹುಲ್ಲನ್ನು ನೀಡಿ ಸಾಕಿದ್ದಾನೆ. ಈಗಾಗಲೇ ಹಲವು ಸ್ಪಧರ್ೆಗಳಲ್ಲಿ ಪಾಲ್ಗೊಂಡಿರುವ ರಾಜು ಎಂಬ ಈ ಕೋಣ ಒಟ್ಟಾರೆಯಾಗಿ 18 ಲಕ್ಷ ರೂ, ಬಹುಮಾನ ಬಾಚಿದೆ. 12 ಕ್ವಿಂಟಾಲ್ ತೂಗುವ, 11.5 ಅಡಿ ಉದ್ದ ಮತ್ತು 5.8 ಅಡಿ ಎತ್ತರವಿರುವ ಈ ಕೋಣಕ್ಕೆ ಹತ್ತು ಕೋಟಿ ನೀಡಲು ಜನರು ಮುಂದೆ ಬಂದಿದ್ದಾರೆ ಆದರೆ ಇದು ನನ್ನ ಮಗುವಿದ್ದಂತೆ ಹಾಗಾಗಿ ಅದನ್ನು ಮಾರುವ ಪ್ರಶ್ನೆಯೇ ಇಲ್ಲ ಎಂದು ಸೋಮಲ್ ಹೇಳುತ್ತಾರೆ.

bull1
ಇನ್ನೊಂದು ಕಡೆ ಯುವರಾಜ್ ಎಂಬ ಮತ್ತೊಂದು ಕೋಣ ಎರಡು ಕೋಟಿ ಬೆಲೆಬಾಳುತ್ತದೆ. 14 ಅಡಿ ಉದ್ದ ಮತ್ತು 5.7 ಅಡಿ ಎತ್ತರದ ಈ ಕೋಣದ ಮಾಲೀಕ ಕರಮ್ವೀರ್ ಸಿಂಗ್. ಈ ಕೋಣವು ವಿವಿಧ ಸ್ಪಧರ್ೆಗಳಲ್ಲಿ ಎರಡು ಲಕ್ಷ ರೂ, ಬಹುಮಾನ ಬಾಚಿದೆ. ಯುವರಾಜ ನನ್ನ ಮಗನಿದ್ದಂತೆ, ಆತನನ್ನು ನಾನು ಸ್ವಂತ ಮಗುವಂತೆ ಸಾಕಿದ್ದೇನೆ ಎಂದು ಸಿಂಗ್ ಹೇಳುತ್ತಾರೆ.

By suddi9

Leave a Reply

Your email address will not be published. Required fields are marked *