ಬಿಜೆಪಿಯತ್ತ ವಾಲುವರೇ ಮಮತಾ ಬ್ಯಾನಜರ್ಿ?
ಕೊಲ್ಕತ್ತಾ: ರಾಜಕೀಯ ರಂಗದಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ ಶತ್ರುಗಳೂ ಅಲ್ಲ. ಈ ಮಾತು ಹಲವು ಬಾರಿ ನಿಜವಾಗಿದೆ. ಈಗ ನಡೆದಿರುವ ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನಜರ್ಿ ಕೇಂದ್ರದಲ್ಲಿ ಸರಾಕರ ಬದಲಾಗಬೇಕೆಂಬ ಹೇಳಿಕೆಯನ್ನು ನೀಡಿದ್ದು, ಇದು ಅವರು ಬಿಜೆಪಿ ಪಾಳಯಕ್ಕೆ ಹತ್ತಿರವಾಗುತ್ತಿರುವ ಸೂಚನೆಯೇ ಎಂಬ ಅನುಮಾನ ಮೂಡುತ್ತಿದೆ.
ಇತ್ತೀಚೆಗಷ್ಟೇ ತೃತೀಯ ರಂಗ ರಚಿಸುವ ಬಗ್ಗೆ ಮಾತನಾಡಿದ್ದ ಮಮತಾ ಇತರ ಸಮಾನ ಮನಸ್ಕ ಪಕ್ಷಗಳ ಜೊತೆ ಸೇರಿ ಆ ಬಗ್ಗೆ ಕಾರ್ಯ ಪ್ರವೃತ್ತರಾಗಿದ್ದರು. ಆದರೆ ಕೆಲವು ದಿನಗಳ ಹಿಂದೆ ಕೊಲ್ಕತ್ತಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಧುರೀಣ ರಾಜನಾಥ್ ಸಿಂಗ್ ಕೇಂದ್ರ ಸರಕಾರ ಆಥರ್ಿಕ ವಿಷಯದಲ್ಲಿ ಪಶ್ಚಿಮ ಬಂಗಾಳಕ್ಕೆ ಮಾಡುತ್ತಿರುವ ಅನ್ಯಾಯವನ್ನು ಟೀಕಿಸುತ್ತಾ ಈ ಬಗ್ಗೆ ಮಮತಾ ಬ್ಯಾನಜರ್ಿಯ ನಿಲುವನ್ನು ಸಮಥರ್ಿಸಿದ್ದರು. ಇದೇ ವೇದಿಕೆಯಲ್ಲಿ ಉಪಸ್ಥಿತರಿದ್ದ ನರೇಂದ್ರ ಮೋದಿ ಕೂಡಾ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನಜರ್ಿ ಆಡಳಿತ ನಡೆಸಿದರೆ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರ ನಡೆಸುವುದು. ಇದರಿಂದ ರಾಜ್ಯಕ್ಕ ಅನುಕೂಲವಾಗಲಿದೆ ಎಂದು ಹೇಳಿದ್ದರು. ಈ ಇಬ್ಬರು ಬಿಜೆಪಿ ಧುರೀಣರ ಹೇಳಿಕೆಯ ಒಂದೆರಡು ದಿನಗಳ ಒಳಗೆಯೇ ಮಮತಾ ಬ್ಯಾನಜರ್ಿ ಬಿಜೆಪಿ ಪರ ಮಾತುಗಳನ್ನಾಡಿದ್ದು ರಾಜಕೀಯ ವಲಯದಲ್ಲಿ ಹೊಸ ಲೆಕ್ಕಾಚಾರಕ್ಕೆ ನಾಂದಿ ಹಾಡಿದೆ.

