ಪೊಳಲಿ: ಬಂಟ್ವಾಳ ತಾಲೂಕಿನ ಬೆಂಜನಪದವು ಕೊರಗಜ್ಜ ಸನ್ನಿಧಿಯಲ್ಲಿ ವಾರ್ಷಿಕ ನೇಮೋತ್ಸವ ಫೆ. ೨೮ರಂದು ನಡೆಯಿತು. ಈ ಸಂದರ್ಭದಲ್ಲಿ ಭಕ್ತರಿಂದ ಕೊರಗಜ್ಜನಿಗೆ ಬಂಗಾರದ ಮುಟ್ಟಾಲೆಯನ್ನು (ಬಂಗಾರದ ಕವಚ) ತುಪ್ಪೆಕಲ್ ಉಳ್ಳಾಕ್ಲು ಮಗ್ರಾಂತಾಯಿ ದೈವಸ್ಥಾನದಿಂದ ಮರವಣಿಗೆಯಲ್ಲಿ ಬೆಂಜನಪದವು ಕೊರಗಜ್ಜನ ಸನ್ನಿಧಿಗೆ ತಂದು ಸಮರ್ಪಿಸಿದರು.
ಕೊರಗಜ್ಜ ಸಾನಿಧ್ಯದ ಧರ್ಮದರ್ಶಿ ವಿಜಯ ಕೆ. ಭಕ್ತರನ್ನು ಸ್ವಾಗತಿಸಿ ಕೊರಗಜ್ಜನ ಗಂಧಪ್ರಸಾದ ನೀಡಿದರು. ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಸಂಕೀರ್ತನೆ ನಡೆಯಿತು. ರಾತ್ರಿ ಕೊರಗಜ್ಜನ ಗಗ್ಗರದ ಸೇವೆ ನಡೆಯಿತು.
ಈ ಸಂದರ್ಭದಲ್ಲಿ ಭದ್ರಕಾಳಿ ದೇವಸ್ಥಾನದ ಧರ್ಮದರ್ಶಿ ರಮೇಶ್ ,ಭಾರತ್ ಭ್ಯಾಂಕ್ ನಿರ್ದೇಶಕ ಉದ್ಯಮಿ ಕೆ. ಗಂಗಾಧರ ಪೂಜಾರಿ , ಉಧ್ಯಮಿ ಉಮೇಶ್ ಸಾಲಿಯಾನ್ ನಂದಿನಿ ಬೇಕರಿ , ಪ್ರೇಮ್ ಜಿತ್ ಶೆಟ್ಟಿ, ಬಿಗ್ ಬಾಸ್ ವಿನ್ನರ್ ಸೈನ್ ಶೆಟ್ಟಿ ,ಪ್ರಜ್ವಲ್ ಕುಮಾರ್ ಕಾರ್ಕಳ ,ರಾಧಕೃಷ್ಣ ತಂತ್ರಿ ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು. .

