ಕುಪ್ಪೆಪದವು: ಕುಪ್ಪೆಪದವು ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಜೆಡಿಯಸ್ ಬೆಂಬಲಿತ ಡಿ.ಪಿ. ಹಮ್ಮಬ್ಬ ಮತ್ತು ಉಪಾಧ್ಯಕ್ಷರಾಗಿ ವಿಮಲಾ ಗಿರಿಧರ್ ಆಯ್ಕೆಯಾಗಿದ್ದಾರೆ. ಪಂಚಾಯತ್ ನ ಒಟ್ಟು 9 ಸದಸ್ಯ ಸ್ಥಾನಗಳಲ್ಲಿ 6 ಜೆಡಿಯಸ್ ಮತ್ತು 3 ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದು, ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಪುರುಷ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮೀಸಲಾತಿ ನಿಗದಿಯಾಗಿತ್ತು.
ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಸೋಮವಾರ ಮಧ್ಯಾಹ್ನ 1 ಗಂಟೆ ಅಂತಿಮ ಗಡುವಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಡಿ.ಪಿ. ಹಮ್ಮಬ್ಬ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ವಿಮಲಾ ಗಿರಿಧರ್ ಹೊರತು ಪಡಿಸಿ ಬೇರೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ ಆಡಳಿತಾಧಿಕಾರಿ, ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಮಧುಕುಮಾರ್ ಅವರು ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಪಿಡಿಒ ಸವಿತಾ ಮಂದೋಲಿಕರ ಮತ್ತು ಸಿಬ್ಬಂದಿ ವರ್ಗ ಸಹಕರಿಸಿದರು.
ಜೆಡಿಯಸ್ ಜಿಲ್ಲಾ ನಾಯಕರಾದ ವಸಂತ ಪೂಜಾರಿ, ಅಕ್ಷಿತ್ ಸುವರ್ಣ, ಪ್ರವೀಣ್ ಕುಮಾರ್ ಜೈನ್, ಮುನೀರ್ ಮುಕ್ಕಚ್ಚೇರಿ, ರಿತೇಶ್ ಸುವರ್ಣ, ಜಯಕುಮಾರ್ ಕಜೆ ಸುಲೇಮಾನ್, ಜೋಸೆಫ್ ರೊಸರಿಯೋ, ಜಬ್ಬರ್ ಕಜೆ ವಲಯ ಯುವ ಜನತಾದಳದ ಅಧ್ಯಕ್ಷ ತಾಜ್ದಾರ್, ಜಯ ಪೂಜಾರಿ ನೀಲಿ ಮನೋಹರ್ ಸಪಲಿಗ ಸದಾಶಿವ ಮತ್ತು ಕಾರ್ಯಕರ್ತರು ಹಾಜರಿದ್ದರು.

